Site icon PowerTV

ಸೌಜನ್ಯ ಕೊಲೆ : ಆರೋಪಿ ಶಿಕ್ಷೆಗಾಗಿ ಕೊರಗಜ್ಜನಿಗೆ ಉರುಳು ಸೇವೆ

ಉಡುಪಿ : ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪಿ ಕೊರಗಜ್ಜ.. ಕೊರಗಜ್ಜ ಎಂದು ರಸ್ತೆಯಲ್ಲಿ ಹುಚ್ಚನಂತೆ ಅಲೆದಾಡಲಿ ಅಂತ ಪ್ರಾರ್ಥಿಸಿ ಕರಾವಳಿಯ ಕಾರಣಿಕ ದೈವ ಕೊರಗಜ್ಜನಿಗೆ ಉರುಳು ಸೇವೆಯ ಮೂಲಕ ಪೂಜೆ ಸಲ್ಲಿಸಲಾಗಿದೆ.

ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ಇರುವ ನೆಲ್ಲಿಕಟ್ಟೆ ಕೊರಗಜ್ಜ ದೈವಸ್ಥಾನದಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ವಿಶೇಷ ಉರುಳು ಸೇವೆ ಮಾಡಿದ್ದಾರೆ. ಮೊದಲು ಪ್ರಾರ್ಥನೆ ಸಲ್ಲಿಸಿದ ನಿತ್ಯಾನಂದ ಒಳಕಾಡು, ಬಳಿಕ ಸೌಜನ್ಯಾಳ ಭಾವಚಿತ್ರ ಹಿಡಿದು ಉರುಳು ಸೇವೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸೌಜನ್ಯ ಅತ್ಯಾಚಾರ ಮಾಡಿದ ಆರೋಪಿಗೆ ಕೊರಗಜ್ಜನೇ ಶಿಕ್ಷೆ ಕೊಡಬೇಕು. ಇದಕ್ಕಾಗಿ ಉರುಳು ಸೇವೆ ಮೂಲಕ ಪ್ರಾರ್ಥನೆ ಸಲ್ಲಿಸಿದ್ದೇನೆ‌. ಆರೋಪಿ ಯಾರೆಂಬುದು ಪತ್ತೆ ಆಗಬೇಕು. ಆರೋಪಿಯೇ ಮುಂದೆ ಬಂದು ತಪ್ಪೊಪ್ಪಿಕೊಳ್ಳಬೇಕು. ಇಲ್ಲವಾದರೆ ಕೊರಗಜ್ಜ ಕೊರಗಜ್ಜ ಎಂದು ಹುಚ್ಚನಂತೆ ತಿರುಗಾಡಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.

Exit mobile version