Site icon PowerTV

ಇಸ್ರೋ ಸಾಧನೆಗೆ ಭಾವುಕರಾದ ಪ್ರಧಾನಿ ಮೋದಿ!

ಬೆಂಗಳೂರು : ನಿಮ್ಮೆಲ್ಲರಿಗೂ ನನ್ನದೊಂದು ಸಲ್ಯೂಟ್​. ಇಸ್ರೋ ವಿಜ್ಞಾನಿಗಳ ಸಾಧನೆಗೆ ದೇಶವೆ ಹೆಮ್ಮೆಪಡುತ್ತಿದೆ, ನಿಮ್ಮ, ಧೈರ್ಯ, ಶಕ್ತಿ, ಶ್ರಮ ಸಾಮರ್ಥ್ಯಕ್ಕೆ ನನ್ನ ನಮನಗಳು ಎಂದು ವಿಜ್ಞಾನಿಗಳಿಗೆ ಕೈ ಜೋಡಿಸಿ ನಮಿಸುವ ಮೂಲಕ ಬಾವುಕ ನುಡಿಗಳನ್ನು ಪ್ರಧಾನಿ ಮೋದಿ ನುಡಿದರು.

ಪೀಣ್ಯದ ಬಳಿ ಇರುವ ಇಸ್ರೋ ಕೇಂದ್ರದಲ್ಲಿ ವಿಜ್ಞಾನಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಚಂದ್ರಯಾನದ ಮೂಲಕ ಇಸ್ರೋ ದೊಡ್ಡ ಸಾಧನೆಯನ್ನು ಮಾಡಿದೆ, ಪ್ರತಿಯೊಬ್ಬ ವಿಜ್ಞಾನಿಗೂ ನನ್ನದೊಂದು ಸೆಲ್ಯೂಟ್ , ಚಂದ್ರನ ಅಂಗಳದಲ್ಲಿ ಪ್ರಜ್ಞಾನ್​ ಪರಾಕ್ರಮ ಮಾಡಿದೆ, ವಿಕ್ರಮ್​ ಲ್ಯಾಂಡರ್​ ಲ್ಯಾಂಡ್​ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದೆ ಎಂದರು.

ಇದನ್ನೂ ಓದಿ: ಪ್ರಧಾನಿ ಮೋದಿಯನ್ನು ಸ್ವಾಗತಿಸಿದ ಇಸ್ರೋ ಮುಖ್ಯಸ್ಥ ಸೋಮನಾಥ್​

ನಿಮ್ಮ ಸಾಧನೆಯನ್ನು ಎಷ್ಟೇ ಕೊಂಡಾಡಿದರೂ ಅದು ಕಡಿಮೆಯೇ ನಿಮ್ಮೆಲರ ಸಾಧನೆ ಇತರರಿಗೆ ಸ್ಪೂರ್ತಿದಾಯಕವಾಗಿದೆ, ನೀವೆಲ್ಲರೂ ಸೇರಿ ಭಾರತದ ಕನಸನ್ನು ನನಸು ಮಾಡಿದ್ದೀರಿ ಎಂದು ಅವರು ವಿಜ್ಞಾನಿಗಳನ್ನ ಹಾಡಿ ಹೊಗಳಿದರು.

Exit mobile version