Site icon PowerTV

ವಿದ್ಯಾರ್ಥಿಗೆ ಸ್ವಧರ್ಮೀಯ ಯುವಕರಿಂದಲೇ ನೈತಿಕ ಪೊಲೀಸ್​ ಗಿರಿ!

ಮಂಗಳೂರು : ಖಾಸಗಿ ಕಾಲೇಜು ವಿದ್ಯಾರ್ಥಿಗೆ ಸ್ವಧರ್ಮೀಯ ಯುವಕರಿಂದಲೇ ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಮಂಗಳೂರು ಹೊರವಲಯದ ಅಡ್ಯಾರ್ ಬಳಿಯ ಫ್ಲಾಟ್ ನಲ್ಲಿ ನಡೆದಿದೆ.

ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳದ ಇಬ್ರಾಹಿಂ ಫಾಹಿಂ (18) ಥಳಿತಕ್ಕೆಗೊಳಗಾದ ಯುವಕ, ಎಸ್ಡಿಪಿಐ ಮುಖಂಡ ಅನ್ವರ್ ಸಾದತ್ ಎಂಬವರ ಪುತ್ರನ ನೇತೃತ್ವದಲ್ಲಿ ಹಲ್ಲೆ ನಡೆಯಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಬೈಕ್​ ವೀಲ್ಹಿಂಗ್​: ಪಿಎಸ್​ಐ ಪುತ್ರನ ಬಂಧಸಿದ ಪೊಲೀಸರು!

ಮಂಗಳೂರಿನ ಅಲೋಶಿಯಸ್ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿ ಇಬ್ರಾಹಿಂ ಫಾಹಿಂ ಮೇಲೆ ಅದೇ ಮಂಗಳೂರಿನ ಬಲ್ಮಠ ಬಳಿಯ ಮತ್ತೊಂದು ಖಾಸಗಿ ಕಾಲೇಜಿನ ಅನಾನ್, ತಬೀಶ್ ಎಂಬ ಮುಸ್ಲಿಂ ವಿದ್ಯಾರ್ಥಿಗಳ ತಂಡ ಹುಡುಗಿ ವಿಚಾರಕ್ಕೆ ವಿದ್ಯಾರ್ಥಿಯನ್ನ ಕಿಡ್ನಾಪ್ ಮಾಡಿ ಗಾಂಜಾ ನಶೆಯಲ್ಲಿ ರಕ್ತ ಹೆಪ್ಪುಗಟ್ಟುವಂತೆ ಥಳಿಸಿ ನೈತಿಕ ಪೊಲೀಸ್ ಗಿರಿ ನಡೆಸಿದ್ದಾರೆ.

ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಸದ್ಯ ಮಂಗಳೂರಿನ ಬಂದರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು ಘಟನೆ ಸಂಬಂಧ ಓರ್ವನ್ನು ಪೊಲೀಸರು  ಬಂಧಸಿದ್ದಾರೆ.

Exit mobile version