Site icon PowerTV

ನಾಪತ್ತೆಯಾಗಿದ್ದ ವಿದ್ಯಾರ್ಥಿ ಶವವಾಗಿ ಪತ್ತೆ!

ತುಮಕೂರು : ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿ ಇಂದು ಶವವಾಗಿ ಪತ್ತೆಯಾಗಿದ್ದಾನೆ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಕೆರೆ ಅಂಗಳದಲ್ಲಿ ನಡೆದಿದೆ.

ಹಂದನಕೆರೆ ಹೋಬಳಿಯ ಗೋಪಾಲಪುರದ ನಿವಾಸಿ ಹೇಮಂತ್ ಕುಮಾರ್ (16) ಮೃತ ದುರ್ದೈವಿ. ಎಂಬಾತ ಎಸ್.ಎಸ್.ಎಲ್.ಸಿ ಓದುತ್ತಿದ್ದು, ಶಾಲೆಯಲ್ಲಿ ಕ್ರೀಡಾಕೂಟವಿದೆ ಎಂದು ತೆರಳಿದ್ದ ವಿದ್ಯಾರ್ಥಿ. ಈ ಹಿನ್ನೆಲೆ ಮೂರು ದಿನಗಳ ಹಿಂದೆ ಮನೆಯಿಂದ ಹೋಗಿದ್ದ ಹೇಮಂತ್, ಪೋಷಕರು ಎಷ್ಟೇ ಹುಡುಕಾಟ ನಡೆಸಿದ್ದರು ಸಿಕ್ಕಿರಲಿಲ್ಲ.

ಇದನ್ನು ಓದಿ : ಎರಡು ಬೈಕ್ ಗಳ ನಡುವೆ ಡಿಕ್ಕಿ ; ಓರ್ವ ಸವಾರ ಸಾವು

ಆದರೆ ಇಂದು ದುರಾದೃಷ್ಟವಶಾತ್ ಹುಳಿಯಾರು ಕೆರೆಯ ಅಂಗಳದಲ್ಲಿ ಶವವಾಗಿ ಪತ್ತೆಯಾಗಿರುವ ಹೇಮಂತ್. ಮಗನ ಸಾವಿನ ಸುದ್ದಿ ಕೇಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಹುಳಿಯಾರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಿದ್ಯಾರ್ಥಿ ಸಾವಿನ ಬಗ್ಗೆ ತನಿಖೆ ಮುಂದುವರೆಸಿದ ಪೋಲಿಸರು.

Exit mobile version