Site icon PowerTV

ಬರ್ತ್​ಡೇ ಪಾರ್ಟಿಗೆ ಹೋದ ಸ್ನೇಹಿತರು ನೀರು ಪಾಲು

ಬೆಂಗಳೂರು : ಸ್ನೇಹಿತರ ಇಬ್ಬರು ಬರ್ತ್​ಡೇ ಪಾರ್ಟಿ ಮುಗಿಸಿ ಕೆರೆಯಲ್ಲಿ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಕಮ್ಮನಹಳ್ಳಿಯ ಕೆರೆಯಲ್ಲಿ ನಡೆದಿದೆ.

ಮಾರತ್ ಹಳ್ಳಿಯ ಕಾರು ಮಾರಾಟ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸೋಲೊಮನ್ ಉದ್ಯೋಗಿ ಹಾಗೂ ಜೆ.ಪಿ. ನಗರದ ಕಾಲ್ ಸೆಂಟರ್​ನಲ್ಲಿ ಕೆಲಸ ಮಾಡುತ್ತಿದ್ದ ಅಭೀಷೇಕ್ ಮೃತ ದುರ್ದೈವಿಗಳು. ಈ ಇಬ್ಬರು ಸ್ನೇಹಿತರು ಮಂಗಳವಾರ ಸೋಲೊಮಾನ್ ಹುಟ್ಟುಹಬ್ಬದ ಹಿನ್ನೆಲೆ ಸ್ನೇಹಿತರಿಗೆಲ್ಲ ಪಾರ್ಟಿ ಆಯೋಜಿಸಿದ್ದರು.

ಇದನ್ನು ಓದಿ : ಕೇಂದ್ರದಿಂದ ಸ್ಮಾರ್ಟ್​ ಸಿಟಿಗಳ ಪಟ್ಟಿ ಬಿಡುಗಡೆ: ರಾಜ್ಯದ ಮೂರು ಜಿಲ್ಲೆಗಳು ಆಯ್ಕೆ

ಈ ವೇಳೆ ಎಲ್ಲಾ ಸ್ನೇಹಿತರ ಜೊತೆ ಸೇರಿ ಮದ್ಯ ಸೇವಿಸಿದ್ದರು. ಬಳಿಕ ಪಾರ್ಟಿ ಮುಗಿಸಿ ಸ್ನೇಹಿತರೆಲ್ಲ ಮನೆಗೆ ತೆರಳಿದ ವೇಳೆ ಅಭಿಷೇಕ, ಸೋಲೊಮನ್ ಚಿಕ್ಕಕಮ್ಮನಹಳ್ಳಿಯ ಕೆರೆಗೆ ಈಜಲು ತೆರಳಿದ್ದರು. ಮದ್ಯದ ನಶೆಯಲ್ಲಿ ಈಜಲು ಹೋಗಿದ್ದ ಪರಿಣಾಮ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಬುಧವಾರ ಬೆಳಗ್ಗೆ ಅವರ ಇಬ್ಬರ ಇಬ್ಬರ ಶವ ಪತ್ತೆಯಾಗಿದ್ದು, ಹುಳಿಮಾವು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version