Site icon PowerTV

ಚಂದ್ರಯಾನ ಯಶಸ್ವಿ ಹಿನ್ನೆಲೆ ಮಕ್ಕಳಿಗೆ ವಿಕ್ರಮ್ ಮತ್ತು ಪ್ರಗ್ಯಾನ್​ ಹೆಸರು ನಾಮಕರಣ!

ಯಾದಗಿರಿ : ಚಂದ್ರಯಾನ-3 ಯಶಸ್ವಿ ಹಿನ್ನಲೆ ಕಳೆದ ಒಂದು ತಿಂಗಳ ಹಿಂದೆ ಜನಿಸಿದ ಮಕ್ಕಳಿಗೆ ವಿಕ್ರಮ ಹಾಗೂ ಪ್ರಗ್ಯಾನ್ ಹೆಸರಿಟ್ಟು ನಾಮಕರಣ ಮಾಡಿದ ಘಟನೆ ಯಾದಗಿರಿ ಜಿಲ್ಲೆ ವಡಗೆರೆಯಲ್ಲಿ ನಡೆದಿದೆ.

ಚಂದ್ರಯಾನ-3 ಯಶಸ್ವಿಗೊಳಿಸಿದ ಇಸ್ರೋಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಇಬ್ಬರು ಮಕ್ಕಳಿಗೆ ವಿಕ್ರಮ್​ ಮತ್ತು ಪ್ರಗ್ಯಾನ್​ ಹೆಸರಿಡಲಾಗಿದೆ.

ಇದನ್ನೂ ಓದಿ: ಆಗಸ್ಟ್​​ 23 ಇನ್ಮುಂದೆ ‘ರಾಷ್ಟ್ರೀಯ ಬಾಹ್ಯಾಕಾಶ ದಿನ’: ಮೋದಿ ಘೋಷಣೆ!

ಒಂದೆ ಕುಟುಂಬದಲ್ಲಿ ಕಳೆದ ಒಂದು ತಿಂಗಳ ಹಿಂದೆ ಜನಸಿರು ಬಾಲಪ್ಪ ಹಾಗೂ ನಾಗಮ್ಮ ದಂಪತಿಯ ಮಗುವಿಗೆ ವಿಕ್ರಮ ಎಂದು ಮತ್ತು ನಿಂಗಪ್ಪ ಹಾಗೂ ಶಿವಮ್ಮ ದಂಪತಿಯ ಮಗುವಿಗೆ ಪ್ರಗ್ಯಾನ್ ಎಂದು ನಾಮಕರಣ ಮಾಡುವ ಮೂಲಕ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಜುಲೈ 28 ರಂದು ವಿಕ್ರಮ ಹೆಸರಿನ ಮಗು ಜನಸಿದ್ದು, ಅಗಸ್ಟ್ 18 ರಂದು  ಪ್ರಗ್ಯಾನ್  ಎಂಬ ಮಗು ಜನಸಿತ್ತು ಈ ಎರಡು ಮಕ್ಕಳ ನಾಮಕರಣ ಅಗಸ್ಟ್ 24 ರಂದು ನೆರವೇರಿಸಲಾಯಿತು.

Exit mobile version