Site icon PowerTV

ಜಲದಿಗ್ಭಂಧನದಿಂದ ಕಾಲು ಕಡಿದುಕೊಂಡ ರೈತನ ಪರದಾಟ

ಕಾರವಾರ : ಜಲದಿಗ್ಬಂಧನದಿಂದ ಓರ್ವ ರೈತ ಕೃಷಿ ಕೆಲಸದ ವೇಳೆ ಕಾಲು ಕಡಿದುಕೊಂಡು ಚಿಕಿತ್ಸೆಯಿಲ್ಲದೆ ಪರದಾಟ ಅನುಭವಿಸುತ್ತಿರುವ ಘಟನೆ ಅಂಕೋಲಾ ತಾಲೂಕಿನ ಕೆಂದಗಿ ಗ್ರಾಮದಲ್ಲಿ ನಡೆದಿದೆ.

ಕೆಂದಗಿ ಗ್ರಾಮದ ಉಮೇಶ್ ಗೌಡ (59) ಎಂಬಾತ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕತ್ತಿಯಿಂದ ಕಾಲು ಕಡಿದುಕೊಂಡಿದ್ದರು. ಮಳೆಗಾಲದಲ್ಲಿ ಬೊಕಳೆ ಹಳ್ಳ, ವತ್ತಿನ ಹಳ್ಳ, ಕಂಬದ ಹಳ್ಳ ಹಾಗೂ ಕೆಂದಗಿ ಹಳ್ಳಗಳಿಂದ ಗ್ರಾಮವು ಜಲದಿಗ್ಬಂಧನ ಆಗಿರುತ್ತದೆ. ಈ ಹಿನ್ನೆಲೆ ಹಳ್ಳಕ್ಕೆ ಸೇತುವೆ ಇರದ ಪರಿಣಾಮ ಚಿಕಿತ್ಸೆಗೆ ಹಳ್ಳ ದಾಟಿ ತೆರಳಲಾಗದೇ 8 ದಿನ ಮನೆಯಲ್ಲೇ ಪರದಾಟ ಅನುಭವಿಸಿದ ರೈತ.

ಇದನ್ನು ಓದಿ : ಕೆಲವೇ ದಿನಗಳಲ್ಲಿ ಕಾವೇರಿ ನಿವಾಸಕ್ಕೆ ಸಿಎಂ ಶಿಫ್ಟ್​!

ಸದ್ಯ ಮಳೆ ಕಡಿಮೆಯಾಗಿದ್ದರಿಂದ ರೈತನ ಗೋಳು ನೋಡಲಾಗದೇ, ತಕ್ಷಣ ಜೋಲಿ ಮೂಲಕ ಹಳ್ಳ ದಾಟಿ ಅರಣ್ಯದಲ್ಲಿ 15 ಕಿಮೀ ಉಮೇಶ್​ನನ್ನು ಹೊತ್ತುಕೊಂಡು ಬಂದ ಗ್ರಾಮಸ್ಥರು. ಹಟ್ಟಿಕೇರಿ ಗ್ರಾಮದ ಹೆದ್ದಾರಿ ತಲುಪಿದ ಗ್ರಾಮಸ್ಥರು, ಬಳಿಕ ಕಾರವಾರದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದರು.

ಸದ್ಯ ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ಉಮೇಶ್ ಗೌಡ.

Exit mobile version