Site icon PowerTV

ಅಪ್ಪನಂತೆಯೇ ಅವ್ಯಾನ್ ದೇವ್ ಪೂಜೆಯಲ್ಲಿ ಭಾಗಿ

ಬೆಂಗಳೂರು : ನಟ ಮತ್ತು ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬ ಜೋರಾಗಿ ಆಚರಣೆ ಮಾಡಿದ್ದಾರೆ.

ನಿಖಿಲ್ ಪತ್ನಿ, ಮಗ ಹಾಗೂ ಕುಟುಂದ ಜೊತೆ ವರಮಹಾಲಕ್ಷ್ಮೀ ಹಬ್ಬ ಆಚರಿಸಿದ್ದಾರೆ. ಅಪ್ಪನಂತೆಯೇ ಅವ್ಯಾನ್ ದೇವ್ ಕೂಡ ಪೂಜೆಯಲ್ಲಿ ಭಾಗಿಯಾಗಿದ್ದು, ನಿಖಿಲ್ ಮನೆಯಲ್ಲಿ ಈ ಬಾರಿಯ ವರಮಹಾಲಕ್ಷ್ಮೀ ಮತ್ತಷ್ಟು ವಿಶೇಷವಾಗಿತ್ತು.

ಮನೆಯಲ್ಲಿ ಲಕ್ಷ್ಮೀ ಪ್ರತಿಷ್ಠಾಪಿಸಿ ಲಕ್ಷ್ಮಿಯನ್ನು ಪೂಜಿಸಿ ಆರಾಧನೆ ಮಾಡಿದ್ದಾರೆ. ಹಬ್ಬ ಆಚರಣೆ ಮಾಡಿದ ಪತ್ನಿ ರೇವತಿ, ತಾಯಿ ಅನಿತಾ ಕುಮಾರಸ್ವಾಮಿ ಹಾಗೂ ತಂದೆ ಹೆಚ್​.ಡಿ ಕುಮಾರಸ್ವಾಮಿ ಅವರ ಜೊತೆ ನಿಖಿಲ್ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಾಡಿನ ಜನತೆಗೆ ಹಬ್ಬದ ಶುಭಾಶಯ ಕೋರಿದ್ದಾರೆ. ‘ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಮಹಾಲಕ್ಷ್ಮೀ ಎಲ್ಲರಿಗೂ ಸಕಲ ಐಶ್ವರ್ಯ ಸಂಪತ್ತನ್ನು ನೀಡಿ ಆಶೀರ್ವದಿಸಲೆಂದು ಪ್ರಾರ್ಥಿಸುತ್ತೇನೆ’ ಎಂದು ನಿಖಿಲ್ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದಾರೆ.

ಹೆಚ್​ಡಿಕೆ ಟ್ವೀಟ್

ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರು ನಾಡಿನ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಶುಭಾಶಯ ಕೋರಿದ್ದಾರೆ. ನಾಡಿನ ಸಮಸ್ತ ಜನತೆಗೆ ಶ್ರೀ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ಆ ತಾಯಿ ಮಹಾಲಕ್ಷ್ಮಿ ಸರ್ವರಿಗೂ ಸುಖ ಸಂತೋಷ ಸಮೃದ್ಧಿ ಹಾಗೂ ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

Exit mobile version