Site icon PowerTV

ವರಮಹಾಲಕ್ಷ್ಮಿ ಹಬ್ಬ: ಗೊರವನಹಳ್ಳಿ ಲಕ್ಷ್ಮಿ ದೇವಿ ದರ್ಶನಕ್ಕೆ ಬಂದ ಜನಸಾಗರ!

ಕೊರಟಗೆರೆ : ನಾಡಿನಾದ್ಯಂತ ಇಂದು ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ  ಸಂಭ್ರಮ ಸಡಗರದಿಂದ ಹಬ್ಬ ಆಚರಣೆ ಮಾಡಲಾಗುತ್ತಿದೆ.

ತುಮಕೂರು ಜಿಲ್ಲೆಯ ತಾಲ್ಲೂಕಿನ ಪ್ರಸಿದ್ಧ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯದಲ್ಲಿ ಇಂದು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾಲಂಕಾರ ಮಾಡಲಾಗಿತ್ತು, ಮುಂಜಾನೆಯಿಂದಲೂ ಪೂಜೆ ಪುನಸ್ಕಾರ ಕಾರ್ಯ ನಡೆಯುತ್ತಿದ್ದು ತುಮಕೂರು ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಿಂದ ದೇವರ ದರ್ಶನಕ್ಕೆ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದರು.

ಹಬ್ಬದ ಪ್ರಯುಕ್ತ ಇಂದು ಸಾವಿರಾರು ಭಕ್ತರು  ದೇವಾಲಯಕ್ಕೆ ಬರುವ ಸಾಧ್ಯತೆ ಇದ್ದು ದೇವಾಲಯದ ಸಮೀಪದಲ್ಲೇ ಭಕ್ತಾದಿಗಳಿಗೆ ಉಚಿತ ಅನ್ನ ಸಂತರ್ಪಣೆ ಕಾರ್ಯ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.

Exit mobile version