Site icon PowerTV

ಕನ್ನಡ ಶಾಲೆಗೆ ಮಲಯಾಳ ಶಿಕ್ಷಕಿ ನೇಮಕ: ಹೈಕೋರ್ಟ್ ಆಕ್ಷೇಪ

ಮಂಗಳೂರು : ಕನ್ನಡ ಶಾಲೆಗೆ ಮಲಯಾಳ ಶಿಕ್ಷಕಿ ನೇಮಿಸಿದ್ದ ಕೇರಳ ಸರ್ಕಾರಕ್ಕೆ ಕನ್ನಡ ತಿಳಿದ ಶಿಕ್ಷಕರನ್ನೇ ನೇಮಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.

ಗಡಿಭಾಗ ಕಾಸರಗೋಡು ಜಿಲ್ಲೆಯ ಅಡೂರು ಪ್ರಾಥಮಿಕ ಶಾಲೆಗೆ ಕನ್ನಡ ತಿಳಿಯದ ಮಲಯಾಳ ಶಿಕ್ಷಕಿಯನ್ನು ನೇಮಿಸಿದ್ದಕ್ಕೆ ವಿರೋಧಿಸಿ ಕಳೆದ ಎರಡು ತಿಂಗಳಿನಿಂದ ಮಕ್ಕಳ ಪೋಷಕರು ಪ್ರತಿಭಟನೆ ನಡೆಸಿ ಹೈಕೋರ್ಟ್​ ಮೆಟ್ಟಿಲೇರಿ ಕಾನೂನು ಹೋರಾಟ ಕೈಗೊಂಡಿದ್ದರು.

ಇದನ್ನೂ ಓದಿ: ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಮೋದಿ ಆಗಮನ!

ಈ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್​ ಕೇರಳ ಸರ್ಕಾರ, ಶಿಕ್ಷಣ ಇಲಾಖೆಗೆ ಚಾಟಿ ಬೀಸಿದ್ದು, ತಕ್ಷಣವೇ ಕನ್ನಡ ಬಲ್ಲ ಶಿಕ್ಷಕರ ನೇಮಿಸುವಂತೆ ಕೇರಳ ಸರ್ಕಾರಕ್ಕೆ ಆದೇಶ ನೀಡಿದೆ. ಕನ್ನಡ ಮಕ್ಕಳಿಗೆ ಮಲಯಾಳಿ ಶಿಕ್ಷಕಿ ನೇಮಿಸಿ ಭಾಷಾ ಅಲ್ಪಸಂಖ್ಯಾತ ಮಕ್ಕಳಿಗೆ ಕಾಸರಗೋಡು ಜಿಲ್ಲೆಯ ಹಲವೆಡೆ ಕನ್ನಡ ಶಾಲೆಗಳಲ್ಲಿ ಅನ್ಯಾಯ ಎಸಗಿದ್ದಾಗಿ ವಾದ ಮಂಡಿಸಿದ್ದರು.

ಪೋಷಕರ ಕಡೆಯ ವಾದ ಪುರಸ್ಕರಿಸಿದ ಕೇರಳ ಹೈಕೋರ್ಟ್ ತಕ್ಷಣವೇ ಕನ್ನಡ ಬಲ್ಲ ಶಿಕ್ಷಕರನ್ನು ನೇಮಿಸುವಂತೆ ಆದೇಶ ನೀಡಿದೆ.

Exit mobile version