Site icon PowerTV

ಮದುವೆ ಮಾಡು ಎಂದ ಮಗನನ್ನೇ ಕೊಂದ ತಂದೆ!!

ಹಾಸನ : ಮದುವೆ ಮಾಡು ಎಂದು ಪೀಡಿಸುತ್ತಿದ್ದ ಮಗನನ್ನು ತಂದೆಯೇ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸಿಪುರ ತಾಲ್ಲೂಕಿನ ಮಾವನೂರು ಗ್ರಾಮದಲ್ಲಿ ನಡೆದಿದೆ.

ಉಮೇಶ್ (35) ಕೊಲೆಯಾದ ವ್ಯಕ್ತಿ , ನಂಜುಂಡೇಗೌಡ ಪುತ್ರನನ್ನು ಕೊಂದ ತಂದೆ. ಉಮೇಶ್​ ಪ್ರತಿನಿತ್ಯ ಕುಡಿದು ಬಂದು ಮದುವೆ ಮಾಡುವಂತೆ ತನ್ನ ತಂದೆ ನಂಜೇಗೌಡ ಜೊತೆ ಜಗಳವಾಡುತ್ತಿದ್ದ,

ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೆ ತಾವರೆ ಹೂ ಕೀಳಲು ಹೋದ ತಂದೆ ಮಗ ಸಾವು!

ಸೋಮವಾರ ಸಂಜೆಯೂ ಕೂಡ ಮನೆಗೆ ಕುಡಿದು ಬಂದ ಉಮೇಶ್ ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಿದ್ದ ನಂಜೇಗೌಡನ ಜೊತೆಗೆ  ಮದುವೆ ಮಾಡುವಂತೆ ಜಗಳ ತೆಗೆದಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ, ಜಗಳ ವಿಕೋಪಕ್ಕೆ ತಿರುಗಿ ತಂದೆ ಮೇಲೆ ಉಮೇಶ್​ ಹಲ್ಲೆಗೆ ಮುಂದಾಗಿದ್ದಾನೆ.

ಈ ವೇಳೆ ನಂಜೇಗೌಡ ಚಾರ್ಜೆಬಲ್​ ಬ್ಯಾಟರಿಯಿಂದ ತಲೆಗೆ ಬಲವಾಗಿ ಹಲ್ಲೆಮಾಡಿದ್ದಾನೆ. ತೀವ್ರ ರಕ್ತ ಸ್ರಾವದಿಂದ ರಕ್ತದ ಮಡುವಿನಲ್ಲಿ ಬಿದ್ದದ್ದ ಉಮೇಶನನ್ನು ಸ್ನೇಹಿತರು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಈ ವೇಳೆ ದಾರಿ ಮದ್ಯದಲ್ಲೇ ಉಮೇಶ್​ ಕೊನೆಯುಸಿರೆಳೆದಿದ್ದಾನೆ.

ಹಲ್ಲೆ ನಡೆಸಿದ ನಂಜೇಗೌಡ ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಹೊಳೆನರಸೀಪುರ ನಗರ ಪೊಲೀಸ್​ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version