Site icon PowerTV

ವರಮಹಾಲಕ್ಷ್ಮಿ ಹಬ್ಬಕ್ಕೆ ತಾವರೆ ಹೂ ಕೀಳಲು ಹೋದ ತಂದೆ ಮಗ ಸಾವು!

ದೊಡ್ಡಬಳ್ಳಾಪುರ :  ಕೆರೆಯಲ್ಲಿ ತಾವರೆ ಹೂ ಕೀಳಲು ಹೋದ ತಂದೆ -ಮಗ ಇಬ್ಬರು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಹುಲಿಕುಂಟೆ ಸಮೀಪದ ಬೂಚನಹಳ್ಳಿ ಯಲ್ಲಿ ನಡೆದಿದೆ.

ನಗರದ ಶಾಂತಿನಗರ ನಿವಸಿಗಳಾದ ತಂದೆ ಪುಟ್ಟರಾಜು(45), ಮಗ ಕೇಶವ( 16) ಮೃತಪಟ್ಟ ದುರ್ದೈವಿಗಳು, ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಮಾರುಕಟ್ಟಯಲ್ಲಿ ಮಾರಾಟ ಮಾಡುವ ಸಲುವಾಗಿ ತಾವರೆ ಹೂವು ಕೀಳಲು ಕೆರೆಗೆ ಇಳಿದ ತಂದೆ – ಮಗ ಇಬ್ಬರು ಕೆರೆಯಲ್ಲಿ ಮುಳುಗಿ ದಾರುಣ ಸಾವುಗೀಡಾಗಿದ್ದಾರೆ.

ಇದನ್ನೂ ಓದಿ: ಬಂಧನ ಪ್ರಶ್ನಿಸಿ ಪುನೀತ್​ ಕೆರೆಹಳ್ಳಿ ಹೇಬಿಯಸ್​ ಕಾರ್ಪಸ್ ಅರ್ಜಿ​ : 6 ಪ್ರತಿವಾದಿಗಳಿಗೆ ಹೈಕೋರ್ಟ್​ ನೊಟೀಸ್

ತಾಲೂಕಿನ ಹುಲಿಕುಡಿ ಬೆಟ್ಟದ ತಪ್ಪಲಿನ ಕೆರೆಯಲ್ಲಿ ತಂದೆ-ಮಗ ಮೃತದೇಹಗಳು ತೇಲುತ್ತಿರುವ ದೃಶ್ಯ ಕಂಡುಬಂದಿದೆ ಅಗ್ನಿಶಾಮಕ ಸಿಬ್ಬಂದಿ ಹಾಗು ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಇಂದು ಬೆಳಗ್ಗೆ ಮೃತ ದೇಹಗಳನ್ನು ಕೆರೆಯಿಂದ  ಹೊರತೆಗೆದಿದ್ದಾರೆ.

ಸದ್ಯ ಈ ಪ್ರಕರಣವು ದೊಡ್ಡಬೆಳವಂಗಳ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ.

Exit mobile version