Site icon PowerTV

ಚಂದ್ರಯಾನ-3 : ವಿಜ್ಞಾನಿಗಳಿಗೆ ಸಿಹಿ ತಿನಿಸಿ ಅಭಿನಂದಿಸಿದ ಸಿಎಂ ಸಿದ್ದರಾಮಯ್ಯ  

ಬೆಂಗಳೂರು : ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಕಾಲಿಡುವ ಮೂಲಕ ಇತಿಹಾಸ ನಿರ್ಮಿಸಿದ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಜ್ಞಾನಿಗಳಗಳನ್ನು ಅಭಿನಂದಿಸಿದರು.

ಬೆಂಗಳೂರಿನ ಇಸ್ರೋ ನಿಯಂತ್ರಣ ಕೇಂದ್ರಕ್ಕೇ ಇಂದು ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪ್ರಪಂಚವೇ ಭಾರತದತ್ತ ತಿರುಗಿ ನೋಡುವಂತ ಸಾಧನೆ ಮಾಡಿದ ವಿಜ್ಞಾನಿಗಳಿಗೆ ಹಾರ ಶಾಲು ಹೊದಿಸಿ, ಸಿಹಿ ತಿನಿಸುವ ಮೂಲಕವಿಜ್ಞಾನಿಗಳ ತಂಡವನ್ನು ಹೃತ್ಪೂರ್ವಕವಾಗಿ ಅಭಿನಂದಿಸಿ ಮಾತುಕತೆ ನಡೆಸಿದರು.

ಬಳಿಕ ಮಾದ್ಯಮ ಪ್ರತಿಕ್ರಿಯೆ ನೀಡಿದ ಅವರು, ಭಾರತದ ಚಂದ್ರಯಾನ-3 ಯಶಸ್ವಿ ಲ್ಯಾಂಡಿಗ್​ ಐತಿಹಾಸಿಕ ಸಾಧನೆ, ಈ ಸಾಧನೆಯಿಂದ ಇಡೀ  ಜಗತ್ತು ಭಾರತದ ಕಡೆ ನೋಡ್ತಿದೆ. ಈ ವರೆಗೆ ರಷ್ಯಾ, ಅಮೆರಿಕ, ಚೀನಾ, ಭಾರತ ರಾಷ್ಟ್ರಗಳು ಮಾತ್ರ ಚಂದ್ರನಿಗೆ ಉಪಗ್ರಹ ಕಳಿಸಿದಾರೆ. ಈಗ ನಮ್ಮ ದೇಶ ಮಾತ್ರ ಚಂದ್ರನ ದಕ್ಷಿಣ ಧ್ರುವಕ್ಕೆ ಉಪಗ್ರಹ ಕಳಿಸಿದೆ ಈ ಸಂದರ್ಭದಲ್ಲಿ ನಾವೆಲ್ಲರು ಇಸ್ರೋ ದ ಈ ಸಾಧನೆಯನ್ನು ಖುಷಿ ಪಡಬೇಕು ಎಂದರು.

ಈ ವೇಳೆ ಇಸ್ರೋ  ಕೆಂದ್ರದ ವಿಜ್ಞಾನಿಗಳ, ಅಧಿಕಾರಿಗಳು ಮತ್ತು ಕಿರಿಯ ವಿಜ್ಞಾನಿಗಳು ಇದ್ದರು.

Exit mobile version