Site icon PowerTV

1.43 ಗಂಟೆ, 24 KM : 1.45 ಲಕ್ಷ ಬಹುಮಾನ ಗೆದ್ದ ಟ್ರ್ಯಾಕ್ಟರ್ ಚಾಲಕ

ಯಾದಗಿರಿ : ಇಲ್ಲೊಬ್ಬ ಅಪರೂಪದ ಸಾಹಸಿ 1 ಗಂಟೆ 43 ನಿಮಿಷಗಳಲ್ಲಿ ಬರೋಬ್ಬರಿ 24 ಕಿಲೋ ಮೀಟರ್ ದೂರ ಹಿಮ್ಮುಖವಾಗಿ ಟ್ರ್ಯಾಕ್ಟರ್ ಚಲಾಯಿಸಿ 1 ಲಕ್ಷದ 45 ಸಾವಿರ ರೂಪಾಯಿ ಬಹುಮಾನವನ್ನು ಬಾಚಿಕೊಂಡಿದ್ದಾನೆ.

ಯಾದಗಿರಿ ಜಿಲ್ಲೆಯ ದೋರನಹಳ್ಳಿ ಗ್ರಾಮದ ನಿವಾಸಿ ಬಸಲಿಂಗಪ್ಪ ಹುರಸಗುಂಡಗಿ ಈ ಅಪರೂಪದ ಸಾಧನೆ ಮಾಡಿ ಭೇಷ್ ಎನಿಸಿಕೊಂಡಿದ್ದಾನೆ.

ನಾಗರ ಪಂಚಮಿ ಅಂಗವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ವಿಭಿನ್ನ ಸಾಹಸ ಸ್ಪರ್ಧೆಗಳು ನಡೆಯುತ್ತವೆ. ಆದ್ರೆ, ಇದೇ‌ ಮೊದಲ ಬಾರಿಗೆ ಯಾದಗಿರಿ ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಹಿಮ್ಮುಖವಾಗಿ ಬಹುದೂರ ಚಲಾಯಿಸುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು.

ದೋರನಹಳ್ಳಿ ಗ್ರಾಮಸ್ಥರಿಂದ ಸಂಗ್ರಹಿಸಿದ್ದ ಒಟ್ಟು 1 ಲಕ್ಷ 45 ಸಾವಿರ ರೂಪಾಯಿ ಹಣವನ್ನು ಬಹುಮಾನವಾಗಿ ನೀಡಲಾಗಿದೆ. ಗ್ರಾಮೀಣ ಸೊಗಡಿನ ಕ್ರೀಡೆಗಳು ಮರೆಯಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ವಿಶೇಷ ಸ್ಪರ್ಧೆ ಆಯೋಜಿಸಿದ್ದು ವಿಶೇಷವಾಗಿತ್ತು.

Exit mobile version