Site icon PowerTV

BIG DAY : ಆ.. ಎರಡು ದಿಗ್ವಿಜಯಕ್ಕೆ ಇಡೀ ಭಾರತ ಕಾತುರ!

ಬೆಂಗಳೂರು : ಆಗಸ್ಟ್ 23, 2023. ಇಂದು ಭಾರತಕ್ಕೆ ಐತಿಹಾಸಿಕ ದಿನ. ಇಡೀ ವಿಶ್ವವೇ ಇಂಡಿಯಾಗೆ ಸಲಾಂ ಹೇಳುವ ಎರಡು ಅಪರೂಪದ ವಿಜಯಗಳ ಸಮೀಪದಲ್ಲಿದೆ.

ಹೌದು, ಒಂದು ಚಂದ್ರಯಾನ-3 ಲ್ಯಾಂಡಿಂಗ್. ಮತ್ತೊಂದು ಫಿಡೆ ಚೆಸ್ ಫೈನಲ್.  ಇಂದು ಸಂಜೆ 6.04ಕ್ಕೆ ಇಸ್ರೋ ಉಡಾವಣೆ ಮಾಡಿದ ಚಂದ್ರಯಾನ-3 ಅನ್ನು ಚಂದ್ರನ ಮೇಲೆ ಸಾಫ್ಟ್​ ಲ್ಯಾಂಡಿಂಗ್ ಮಾಡುವುದು.

ಮತ್ತೊಂದು, 18 ವರ್ಷದ ಭಾರತದ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಅವರು ವಿಶ್ವ ಚಾಂಪಿಯನ್ ಆಗುವ ಮೂಲಕ ಇತಿಹಾಸ ಸೃಷ್ಟಿಸಲಿದ್ದಾರೆ. ಫಿಡೆ ಫೈನಲ್ ಇಂದು ಸಂಜೆ 4.30ಕ್ಕೆ ನಡೆಯಲಿದೆ. ಭಾರತ ಎರಡರಲ್ಲೂ ದಿಗ್ವಿಜಯ ಸಾಧಿಸಲಿ ಎಂದು ಅಸಂಖ್ಯಾತ ಭಾರತೀಯರು ಶುಭ ಹಾರೈಸಿದ್ದಾರೆ.

ಇಂಡೋಐರ್ಲೆಂಡ್ ಕದನ

ಇನ್ನೂ, ಇಂದು ಇಂಡಿಯಾ ಹಾಗೂ ಐರ್ಲೆಂಡ್ ನಡುವಿನ 3ನೇ ಟಿ-20 ಪಂದ್ಯ ನಡೆಯಲಿದೆ. ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿ ಸರಣಿ ಜಯಿಸಿರುವ ಭಾರತ, ಕ್ಲೀನ್ ಸ್ವೀಪ್​ನತ್ತ ಕಣ್ಣಿಟ್ಟಿದೆ. ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ.

Exit mobile version