Site icon PowerTV

ಕಾಂಗ್ರೆಸ್-ಬಿಜೆಪಿಯಿಂದ ಆಹ್ವಾನ ಬಂದಿದ್ದು ನಿಜ : ಜೆಡಿಎಸ್ ಶಾಸಕ

ಕೋಲಾರ : ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೆ ನನ್ನನ್ನು ಆಹ್ವಾನಿಸಿರುವುದು ನಿಜ ಎಂದು ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ ಹೊಸ ಬಾಂಬ್ ಸಿಡಿಸಿದ್ದಾರೆ.

ಆಪರೇಷನ್ ಹಸ್ತದ ಕುರಿತು ಮಾತನಾಡಿರುವ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಲು ನನ್ನನ್ನು ಕೇಳಿದ್ದಾರೆ ಎಂದು ಹೇಳಿದ್ದಾರೆ.

ಜೆಡಿಎಸ್ ಪಕ್ಷ ತೊರೆದು ಯಾವುದೇ ಪಕ್ಷಕ್ಕೂ ನಾನು ಹೋಗುವುದಿಲ್ಲ. ಬಂಗಾರಪೇಟೆ ಕಾಂಗ್ರೆಸ್ ಶಾಸಕ ನಾರಾಯಣಸ್ವಾಮಿ ಆಹ್ವಾನಿಸಿರುವುದು ನಿಜ. ಆತ್ಮೀಯತೆ, ವಿಶ್ವಾಸದ ಕಾರಣಕ್ಕಾಗಿ ನನ್ನನ್ನು ಅವರು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಕೋಲಾರ ಮುಖಂಡರು ನನ್ನನ್ನು ದೆಹಲಿಗೆ ಕರೆದಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ಪಕ್ಷ ಸೇರುವ ಆಹ್ವಾನವನ್ನು ನಿರಾಕರಿಸಿದ್ದೇನೆ. ಜೆಡಿಎಸ್ ವರಿಷ್ಠರು, ಮುಖಂಡರು, ಕಾರ್ಯಕರ್ತರ‌ ಹಂಗಿನಲ್ಲಿ ನಾನಿದ್ದೇನೆ ಎಂದು ಎಲ್ಲಾ ವದಂತಿಗಳಿಗೆ ಮಂಜುನಾಥ್ ತೆರೆ ಎಳೆದಿದ್ದಾರೆ.

Exit mobile version