Site icon PowerTV

ಡಾಲಿ ಹುಟ್ಟುಹಬ್ಬ: 2ಸಾವಿರ ಜನಕ್ಕೆ ಖಡಕ್ ನಾರ್ಥ್​ ಕರ್ನಾಟಕ ಸ್ಟೈಲ್​ ಊಟದ ವ್ಯವಸ್ಥೆ!

ಬೆಂಗಳೂರು: ಸ್ಯಾಂಡಲ್​ವುಡ್​ ನಟ ಡಾಲಿ ಧನಂಜಯ ಅವರಿಗೆ  ಇಂದು ಹುಟ್ಟುಹಬ್ಬದ ಸಂಭ್ರಮ. ನಾಲ್ಕು ವರ್ಷದ ನಂತರ ತಮ್ಮ ಜನ್ಮದಿನವನ್ನು ಅಭಿಮಾನಿಗಳ ಜೊತೆಯಲ್ಲಿ ಆಚರಿಸಿಕೊಳ್ಳಲು ಸಿದ್ದತೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ನಟ ಡಾಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದೂ ಡಾಲಿಗೆ ಶುಭಾಷಯಗಳನ್ನು ಕೋರಲು ಬರುವ ಅಭಿಮಾನಿಗಳಿಗೆ ಸೂಪರ್ ಸ್ಪೆಷಲ್ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಶಿವರಾಜ್ ಪಾಟೀಲ್ ಗುಂಜಳ್ಳಿ ನೇತೃತ್ವದಲ್ಲಿ ಅಭಿಮಾನಿಗಳಿಗೆ ಉತ್ತರ ಕರ್ನಾಟಕ ಸ್ಪೆಷಲ್​ ರಾಯಚೂರು ಸಿಂಧನೂರಿನಿಂದ ಖಡಕ್ ರೊಟ್ಟಿ, ಎಣ್ಣೆ ಬದನೆಕಯಿ ಪುಂಡೆ ಪಲ್ಯೆ, ಬೂಂದಿ, ಶೇಂಗ ಹಿಂಡಿ , ಮೆಣಸಿನಕಾಯಿ ವ್ಯವಸ್ಥೆಯನ್ನು ಮಾಡಲಾಗಿದೆ. ಉತ್ತರ ಕರ್ನಾಟಕ ಹಾಗೂ ಸೌತ್ ಇಂಡಿಯನ್ ಎರಡು ಶೈಲಿಯ ಊಟದ ವ್ಯವಸ್ಥೆಯನ್ನು ಸುಮಾರು 2 ಸಾವಿರ ಜನರಿಗೆ ಉಣಬಡಿಸಲು ತಯಾರಿ ಮಾಡಿಕೊಳ್ಳಲಾಗಿದೆ.

ಮಂಗಳವಾರ ಮಧ್ಯರಾತ್ರಿ ತಮ್ಮ ಅಭಿಮಾನಿಗಳೊಂದಿಗೆ ನಟ ಡಾಲಿ ಧನಂಜಯ್​ ಕೇಕ್​ ಕಟ್​ ಮಾಡುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇತ್ತೀಚೆಗೆ ತಮ್ಮ ಮನೋಜ್ನ ಅಭಿನಯದಿಂದ ಸ್ಯಾಂಡಲ್​ವುಡ್​ ಮಾತ್ರವಲ್ಲದೇ ತೆಲುಗು ಭಾಷೆಯಗಳ ಚಿತ್ರದಲ್ಲಿ ನಟ ಧನಂಜಯ್​ ತುಂಬ ಬ್ಯುಸಿಯಾಗಿದ್ದಾರೆ.

Exit mobile version