Site icon PowerTV

ಬ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ದಿನೇಶ ಗುಂಡುರಾವ್

ಬೀದರ್ : ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳ ಕುರಿತು ಮಾಹಿತಿ ಪಡೆಯಲು ಭೇಟಿ ನೀಡಿದ್ದ ಆರೋಗ್ಯ ಸಚಿವ ದಿನೇಶ ಗುಂಡುರಾವ್.

ಜಿಲ್ಲೆಯ ಬ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದ ಆರೋಗ್ಯ ಸಚಿವ ದಿನೇಶ ಗುಂಡುರಾವ್ ಅವರು ಮಹಿಳಾ ವಾರ್ಡ್​ ಮತ್ತು ಮಕ್ಕಳ ವಾರ್ಡ್​ಗೆ ತೆರಳಿ, ರೋಗಿಗಳಿಂದ ಮಾಹಿತಿ ಪಡೆದರು. ಬಳಿಕ ಆಸ್ಪತ್ರೆಯಲ್ಲಿ ಬಿಸಿ ನೀರು ಕೊಡ್ತಾರಾ, ಯಾರು ಭಯ ಪಡಬೇಡಿ ಹೇಳಿ ಎಂದು ರೋಗಿಗಳನ್ನು ವಿಚಾರಿಸಿದ ದಿನೇಶ್ ಗುಂಡುರಾವ್.

ಇದನ್ನು ಓದಿ : ಸರ್ವ ಪಕ್ಷಗಳ ಸಭೆಯಲ್ಲಿ ಯಡಿಯೂರಪ್ಪ ಗುಡುಗು

ಅಷ್ಟೇ ಅಲ್ಲದೆ ನವಜಾತ ಶಿಶುಗಳ ವಾರ್ಡ್​ ಮತ್ತು ಐಸಿಯುಗಳಿಗೆ ತೆರಳಿ ಪರಿಶೀಲನೆಯನ್ನು ನಡೆಸಿದರು. ಆಸ್ಪತ್ರೆಯಲ್ಲಿ ಯಾವುದೇ ಸಮಸ್ಯೆ ಇದ್ದರು ಹೇಳಿ ಸರಿಪಡಿಸೋಣ ಎಂದು ರೋಗಿಗಳಿಗೆ ಭರವಸೆಯನ್ನು ನೀಡಿದ ಸಚಿವ ಈಶ್ವರ ಖಂಡ್ರೆ.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಪೌರಾಡಳಿತ ಸಚಿವ ರಹೀಂಖಾನ್ ಮತ್ತು ಆಸ್ಪತ್ರೆ ವೈದ್ಯಾಧಿಕಾರಿಗಳು ಸಚಿವ ದಿನೇಶ ಗುಂಡುರಾವ್ ಅವರಿಗೆ ಸಾಥ್ ನೀಡಿದರು.

Exit mobile version