Site icon PowerTV

ಮನೆಯಲ್ಲಿ ನಿಧಿ ಇದೆ ಅಂತ 3*20 ಅಡಿ ಗುಂಡಿ ತೆಗೆದ ಲೇಡಿ

ಚಾಮರಾಜನಗರ : ಕುಟುಂಬಸ್ಥರು ನಿಧಿ ಆಸೆಗೋಸ್ಕರ ಮನೆಯಲ್ಲಿಯೇ ಗುಂಡಿ ತೆಗೆದಿರುವ ಘಟನೆ ಚಾಮರಾಜನಗರದ ಹನೂರು ತಾಲೂಕಿನ ವಿ.ಎಸ್.ದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಜ್ಯೋತಿಷಿ ಮಾತು ಕೇಳಿ ಗ್ರಾಮದ ಭಾಗ್ಯ ಎಂಬುವವರು ನಿಧಿ ಶೋಧಕ್ಕೆ ಮುಂದಾಗಿದ್ದಾರೆ. ಭಾಗ್ಯ ಸ್ವಂತ ಊರಿನಲ್ಲಿ ಮನೆ ವಾಸ್ತು ಸರಿ ಇಲ್ಲ ಎಂದು ಮನೆ ಖಾಲಿ ಮಾಡಿ ಬೆಂಗಳೂರಿನಲ್ಲಿ ವಾಸವಿದ್ದಳು. ಈ ವೇಳೆ ಭಾಗ್ಯ ವಾಸ್ತು ಬಗ್ಗೆ ವಿಚಾರಿಸಲು ಹೋದಾಗ ನಿಮ್ಮ ಮನೆಯಲ್ಲಿ ನಿಧಿ ಇದೆ ಎಂದು ಜ್ಯೋತಿಷಿ ಹೇಳಿದ್ದಾರೆ.

ಹಣದ ಆಸೆಗೆ ನಿಮ್ಮ ಮನೆಯಲ್ಲಿ ನಿಧಿ ಇದೆ ಎಂದು ಜ್ಯೋತಿಷಿ ಹೇಳಿದ್ದಾನೆ. ಈ ಮಾತನ್ನ ಕೇಳಿದ ಭಾಗ್ಯ ನಿಧಿ ಆಸೆಯಿಂದ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ 3 ಅಡಿ ಅಗಲ 20 ಅಡಿ ಉದ್ದದ ಗುಂಡಿ ತೆಗೆದಿದ್ದಾಳೆ.

ವಿಷಯ ತಿಳಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಭಾಗ್ಯ ಮತ್ತು ಸಂಬಂಧಿಕರು ಸ್ಥಳದಿಂದ ಪರಾರಿಯಾಗಿದ್ದಾರೆ.

Exit mobile version