Site icon PowerTV

ಅದೆಲ್ಲ ಸುಳ್ಳು.. ಭ್ರಮೆ.. ಸರ್ಕಾರ ಪತನ ಆಗಲ್ಲ : ಕಾಗೋಡು ತಿಮ್ಮಪ್ಪ

ದಾವಣಗೆರೆ : ಆರು ತಿಂಗಳಲ್ಲಿ ಕಾಂಗ್ರೆಸ್​ ಸರ್ಕಾರ ಪತನ ಆಗಲಿದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅದೆಲ್ಲ ಸುಳ್ಳು, ಭ್ರಮೆ. ಈ ಸರ್ಕಾರ ಪತನ ಆಗೋದಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚೆನ್ನಾಗಿಯೇ ನಡೆಯುತ್ತಿದೆ. ಕಾಂಗ್ರೆಸ್​ಗೆ ಒಳ್ಳೆಯ ವಾತಾವರಣ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಪರೇಷನ್ ಹಸ್ತದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಪರೇಷನ್ಏನೂ ಇಲ್ಲ. ಪಕ್ಷದಲ್ಲಿ ಅಸಮಧಾನ ಇದ್ದಾಗ ಪಕ್ಷಾಂತರ ಮಾಡುತ್ತಾರೆ. ಅವರಾಗಿಯೇ ಕೆಲವರು ಪಕ್ಷಕ್ಕೆ ಬರ್ತಾ ಇದ್ದಾರೆ. ನಮ್ಮ ಪಕ್ಷದವರು ಆಪರೇಷನ್ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್​ಗೆ ಬಂದ್ರೆ ಮುಳುಗಿ ಹೋಗ್ತಾರೆ : ಡಾ.ಜಿ. ಪರಮೇಶ್ವರ್

ನಾನು ಲೋಕಸಭೆಗೆ ಸ್ಪರ್ಧೆ ಮಾಡಲ್ಲ

ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಮಾತನಾಡಿರುವ ಅವರು, ನಾನು ಲೋಕಸಭೆಗೆ ಸ್ಪರ್ಧೆ ಮಾಡೋದಿಲ್ಲ ಎಂದರು. ಇನ್ನೂ, ಕುಮಾರ ಬಂಗಾರಪ್ಪ ಕಾಂಗ್ರೆಸ್​ಗೆ ಬರೋದರ ಬಗ್ಗೆ ಗೊತ್ತಿಲ್ಲ. ಆಯನೂರು ಮಂಜುನಾಥ್ ನನ್ನ ಬಳಿ ಚರ್ಚೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

Exit mobile version