Site icon PowerTV

ಪ್ರಕಾಶ್ ರೈ ರಿಯಲ್ ಲೈಫ್​ನಲ್ಲೂ ವಿಲನ್ : ಆರ್. ಅಶೋಕ್

ಬೆಂಗಳೂರು : ಸಿನಿಮಾ ರೀತಿಯಲ್ಲೇ ನಿಜ ಜೀವನದಲ್ಲೂ ನಟ ಪ್ರಕಾಶ್ ರೈ ವಿಲನ್ ಆಗಿದ್ದಾನೆ ಎಂದು ಮಾಜಿ ಸಚಿವ ಆರ್​. ಅಶೋಕ್ ಲೇವಡಿ ಮಾಡಿದ್ದಾರೆ.

ಚಂದ್ರಯಾನ-3 ಕುರಿತು ಪ್ರಕಾಶ್ ರೈ ವ್ಯಂಗ್ಯ ವಿಚಾರವಾಗಿ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪ್ರಕಾಶ್ ರೈ ಒಬ್ಬ ವಿಕೃತ ಮನುಷ್ಯ ಎಂದು ಕುಟುಕಿದ್ದಾರೆ.

ನಾನು ಕೂಡ ಕಾರ್ಟೂನ್ ನೋಡಿದ್ದೇನೆ. ಚಹಾ ಮಾರುವ ಮೂಲಕ ವಿಜ್ಞಾನಿಗಳನ್ನು ಟೀಕೆ ಮಾಡುವುದನ್ನು ನೋಡಿದ್ರೆ, ಇದು ಕೀಳು ಪ್ರವೃತ್ತಿ ಅನಿಸುತ್ತೆ. ಸಾಕಷ್ಟು ಕಲಾವಿದರನ್ನು ನೋಡಿದ್ದೇನೆ. ಈತನೂ ಸಹ ಕಲಾವಿದ. ಆದರೆ, ಡಾ. ರಾಜ್​ಕುಮಾರ್ ಹಾಗೂ ರಜನಿಕಾಂತ್ ಅವರೆಲ್ಲಾ ಉತ್ತಮ ಕಲಾವಿದರು. ಆದರೆ, ಇವನನ್ನು ಕಲಾವಿದ ಅಂತ ಕರೆಯೋಕೆ ಆಗಲ್ಲ ಎಂದು ಟೀಕಿಸಿದ್ದಾರೆ.

ಭಗವಂತನ ಇಚ್ಛೆ ಇದೆ

ನಾಳೆ ಚಂದ್ರಯಾನ-3 ಲ್ಯಾಂಡಿಂಗ್ ವಿಚಾರವಾಗಿ ಮಾತನಾಡಿ, ನಾಳೆ ಚಂದ್ರಯಾನ-3 ಲ್ಯಾಂಡ್ ಆಗುತ್ತಿದೆ. ನಮ್ಮ ಇಸ್ರೋ ವಿಜ್ಞಾನಿಗಳು ಆರಂಭದಲ್ಲಿ ತಿರುಪತಿ ಹಾಗೂ ನಿನ್ನೆ ಕಟೀಲ್ ಆಶೀರ್ವಾದ ಪಡೆದಿದ್ದಾರೆ. ಭಗವಂತನ ಇಚ್ಛೆ ಇದೆ, ಚಂದ್ರಯಾನ-3ರ ಲ್ಯಾಂಡಿಂಗ್​ಗೆ ಶುಭ ಕೊರುತ್ತೇನೆ ಎಂದು ಹೇಳಿದ್ದಾರೆ.

Exit mobile version