Site icon PowerTV

ಮೈತ್ರಿಗಾಗಿ ರಾಜ್ಯವನ್ನೇ ಪಣಕ್ಕಿಟ್ಟಿದ್ದಾರೆ : ಯತ್ನಾಳ್

ವಿಜಯಪುರ : ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ಕಾಂಗ್ರೆಸ್​ ಸರ್ಕಾರದ ನಡೆಗೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಯತ್ನಾಳ್, ರಾಜ್ಯ ಕಾಂಗ್ರೆಸ್​ ನಾಯಕರು ಕಾಂಗ್ರೆಸ್ ಪಕ್ಷದ ಮೈತ್ರಿಗಾಗಿ ರಾಜ್ಯವನ್ನೇ ಪಣಕ್ಕಿಟ್ಟಿದ್ದಾರೆ. ಇವರ ಚುನಾವಣಾ ಕಳ್ಳರ ಕೂಟದ ರಕ್ಷಣೆಗಾಗಿ ಕಾವೇರಿ ನೀರು ತಮಿಳುನಾಡಿಗೆ ಹರಿಸಿರುವುದು ಅಕ್ಷಮ್ಯ ಅಪರಾಧ ಎಂದು ಛೇಡಿಸಿದ್ದಾರೆ.

ಡಿಎಂಕೆ ಇವರ ಕೂಟದ ಸದಸ್ಯ ಪಕ್ಷ. ಈ ಕಾರಣ ರಾಜಕೀಯ ದುರುದ್ದೇಶ ರಾಜ್ಯದ ಹಿತಾಸಕ್ತಿ ಕಾಪಾಡಲು ಇವರು ಮನಸ್ಸು ಮಾಡುತ್ತಿಲ್ಲ. ರಾಜ್ಯದಲ್ಲಿ ಬರ ಇದ್ದರೂ ಕಾವೇರಿ ನೀರನ್ನು ಹೆಚ್ಚಾಗಿ ತಮಿಳುನಾಡಿಗೆ ಹರಿಸಿರುವುದು ರಾಜ್ಯದ ರೈತರಿಗೆ ಮಾಡಿರುವ ಮಹಾ ಮೋಸ ಎಂದು ಕಿಡಿಕಾರಿದ್ದಾರೆ.

ನಾಳೆ ಸರ್ವಪಕ್ಷಗಳ ಸಭೆ

ಕಾವೇರಿ ನೀರು ವಿವಾದ ಕುರಿತು ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವಪಕ್ಷ ಸಭೆ ಕರೆದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೂ ಸಿಎಂ ನೀಡಿದ್ದಾರೆ. ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಹಾಗೂ ಇನ್ನಿತರ ನಾಯಕರು ಭಾಗವಹಿಸಲಿದ್ದಾರೆ.

Exit mobile version