Site icon PowerTV

ರಾಜವಂಶಸ್ಥ, ಮಾಜಿ ಸಚಿವ ಶ್ರೀರಂಗದೇವರಾಯಲು ಇನ್ನಿಲ್ಲ

ಕೊಪ್ಪಳ : ವಿಜಯಸಾಮ್ರಾಜ್ಯದ ವಂಶಸ್ಥರು ಹಾಗೂ ಮಾಜಿ ಸಚಿವ ಶ್ರೀರಂಗದೇವರಾಯಲು(87) ಅವರು ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ.

ಮೃತ ಶ್ರೀರಂಗದೇವರಾಯಲು 5 ಬಾರಿ ಶಾಸಕರಾಗಿದ್ದರು. ಕೊಪ್ಪಳ ಜಿಲ್ಲೆಯ ಗಂಗಾವತಿಯ ಅವರ ನಿವಾಸದಲ್ಲಿ ಇಂದು ಸಂಜೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಲಲಿತಾರಾಣಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಆನೆಗೊಂದಿಯಲ್ಲಿ ನಾಳೆ ಮಧ್ಯಾಹ್ನ ನೆರವೇರಲಿದೆ ಎಂದು ತಿಳಿದುಬಂದಿದೆ.

ಕನಕಗಿರಿ ಕ್ಷೇತ್ರದಿಂದ ಎರಡು ಬಾರಿ ಹಾಗೂ ಗಂಗಾವತಿ ಕ್ಷೇತ್ರದಿಂದ ಮೂರು ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಒಟ್ಟು ಐದು ಬಾರಿ ಶಾಸಕರಾಗಿ ಗೆಲುವು ಸಾಧಿಸಿದ್ದರು. ಶ್ರೀರಂಗದೇವರಾಯಲು ಅವರ ನಿಧನಕ್ಕೆ ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ.

ಶಾಸಕ ಜನಾರ್ಧನ ರೆಡ್ಡಿ ಸಂತಾಪ

ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರು ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಆನೆಗೊಂದಿ ರಾಜಮನೆತನದ ಹಿರಿಯರು, ಹಿರಿಯ ಮುಖಂಡರು ಗಂಗಾವತಿ ಮತ್ತು ಕನಕಗಿರಿ ಕ್ಷೇತ್ರದಿಂದ ಐದು ಭಾರಿ ಶಾಸಕರಾಗಿದ್ದ ಮಾಜಿ ಸಚಿವರಾದ ಶ್ರೀರಂಗದೇವರಾಯಲು(87) ಇವರು ವಯೋ ಸಹಜವಾಗಿ ನಿಧನರಾಗಿದ್ದಾರೆ. ಇವರ ನಿಧನದಿಂದ ಅವರ ಕುಟುಂಬ ಮತ್ತು ಗಂಗಾವತಿ, ಕನಕಗಿರಿ ಕ್ಷೇತ್ರದ ಜನರು ದುಕ್ಕಿತರಾಗಿದ್ದು, ಇವರ ದುಃಖದಲ್ಲಿ ನಾನು ಭಾಗಿಯಾದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

Exit mobile version