Site icon PowerTV

ನವರಂಗಿ ಆಟ ಆಡ್ತಾ ಇರೋದು ಡಿಕೆಶಿ: ಸಿ.ಟಿ ರವಿ

ಮಂಡ್ಯ : ನವರಂಗಿ ಆಟ ಆಡ್ತಾ ಇರೋದು ಬಿಜೆಪಿಯವರಲ್ಲ ಡಿಕೆಶಿ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ದ ಬಿಜೆಪಿ ಮುಖಂಡ ಸಿ.ಟಿ ರವಿ ಕಿಡಿಕಾರಿದ್ದಾರೆ.

ಇದನ್ನು ಓದಿ: ಬೆಂಗಳೂರು: ರಸ್ತೆ ಮದ್ಯೆ ಉರುಳಿಬಿದ್ದ ಬೃಹತ್​ ಮರ!

ನಗರದಲ್ಲಿ ಮಾತನಾಡಿದ ಅವರು, ಕಾವೇರಿ ನೀರಿನ ವಿಚಾರವಾಗಿ ನೀವೆ ಪಾದಯಾತ್ರೆ ಮಾಡಿ, ಈಗ ನೀವೆ ತಮಿಳುನಾಡಿಗೆ ನೀರು ಬಿಟ್ಟಿದ್ದೀರಿ, ಈಗ ಆಡ್ತಿರೋದು ನವರಂಗಿ ಆಟ ತಾನೆ. ಈ ಬಾರಿ ಚುನಾವಣೆಯಲ್ಲಿ ಮಂಡ್ಯದ ಜನತೆ ನಿಮಗೆ ಹೆಚ್ವು ಸ್ಥಾನ ಕೊಟ್ಟು ಗೆಲ್ಲಿಸಿದ್ದಾರೆ. ಆದರೆ, ಈಗ ಮಂಡ್ಯದ ಜನರಿಗೆ ನೀವು ಮಾಡ್ತಿರೋದು ಏನು ಪ್ರಶ್ನಿಸಿದರು.

ನ್ಯಾಯಾಲಯಕ್ಕೆ ರಾಜ್ಯದಲ್ಲಿರುವ ಸದ್ಯದ ಪರಿಸ್ಥತಿಯ ಬಗ್ಗೆ ಮನವರಿಕೆ ಮಾಡಬೇಕಿತ್ತು ಆದರೆ, ಅದನ್ನು ಬಿಟ್ಟು ತಮಿಳುನಾಡಿಗೆ ನೀರು ಬಿಟ್ಟು ನವರಂಗಿ ಆಟ ಆಡುತ್ತಿದ್ದಾರೆ ಎಂದು ಕಾಂಗ್ರೆಸ್​ ವಿರುದ್ದ ಸಿಟಿ ರವಿ ಕಿಡಿ ಕಾರಿದರು.

Exit mobile version