Site icon PowerTV

ಬೆಂಗಳೂರು: ರಸ್ತೆ ಮದ್ಯೆ ಉರುಳಿಬಿದ್ದ ಬೃಹತ್​ ಮರ!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಬೆಳಗ್ಗೆ ಬೃಹತ್​ ಮರವೊಂದು ಉರುಳಿ ಬಿದ್ದಿದ್ದು ಭಾರಿ ಅನಾಹುತ ತಪ್ಪಿದೆ.

ನಗರದ ಬಸವನಗುಡಿಯ ಡಾ.ಓಮರ್ ಶರೀಫ್ ರಸ್ತೆಯಲ್ಲಿರುವ ಬೃಹತ್ ಮರವೊಂದು ಸುಮಾರು ೧೦ ಗಂಟೆ ವೇಳೆಗೆ ನೆಲಕ್ಕುರುಳಿ ಬಿದ್ದಿದೆ. ಘಟನೆಯಿಂದ ಅದೃಷ್ಟವಶಾತ್ ವಾಹನಗಳ ಸಂಚಾರ ಕಡಿಮೆ ಇದ್ದ ಕಾರಣ ಬಾರಿ ಅನಾಹುತ ತಪ್ಪಿದೆ.

ಇದನ್ನೂ ಓದಿ: 10 ಲಕ್ಷ ಮೌಲ್ಯದ ಪೆಟ್ರೋಲ್​ ಮತ್ತು ಡೀಸೆಲ್​ ರಸ್ತೆಗೆ ಬಿಟ್ಟ ದುಷ್ಕರ್ಮಿಗಳು!

ಬಿಬಿಎಂಪಿ ಸಿಬ್ಬಂದಿಗಳು ಕಳೆದ ಎರಡು ದಿನದ ಹಿಂದೆಯಷ್ಟೇ  ಮರದ ಒಂದು ಭಾಗವನ್ನ ಕತ್ತರಿಸಿದ್ದರು, ಮರದ ಮತ್ತೊಂದು ಭಾಗದಲ್ಲಿ ತೂಕ ಹೆಚ್ಚಾದ ಹಿನ್ನೆಲೆ ಇಂದು ಧರೆಗುರುಳಿದೆ.

ಮರ ರಸ್ತೆಗೆ ಬಿದ್ದಿರೋ ಹಿನ್ನೆಲೆ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು ಸಾರ್ವಜನಿಕರು ಹಾಗು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Exit mobile version