Site icon PowerTV

ಅಲ್ಪಸಂಖ್ಯಾತ ನಿಗಮದಿಂದ 8 ಹೊಸ ಸ್ಕೀಂ ಜಾರಿ : ಜಮೀರ್ ಅಹಮದ್

ಬೆಂಗಳೂರು : ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಎಂಟು ನೂತನ ಸ್ಕೀಂ ಲಾಂಚ್ ಮಾಡ್ತಾ ಇದ್ದೇವೆ ಎಂದು ಸಚಿವ ಬಿ.ಝಡ್ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಸರ್ಕಾರ ತಡೆಹಿಡಿದಿದ್ದ ಯೋಜನೆಗಳನ್ನು ನಾವು ಮರು ಚಾಲನೆ ಮಾಡ್ತಿದ್ದೇವೆ. ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆ ಜಾರಿ ಮಾಡ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಸ್ವಾವಲಂಬಿ ಸಾರಥಿ ಯೋಜನೆ, ಶ್ರಮಶಕ್ತಿ ಯೋಜನೆ, ಗಂಗಾ ಕಲ್ಯಾಣ ಸೇರಿ ಹಲವು ಯೋಜನೆ ಪ್ರಾರಂಭ ಮಾಡ್ತಿದ್ದೇವೆ. ಬಡವರಿಗೆ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವುದಕ್ಕೆ ಅವಕಾಶ ಇರಲಿಲ್ಲ. ಬಿಜೆಪಿಯವರು ಯಾಕೆ ಕೆಲವು ಯೋಜನೆ ಸ್ಟಾಪ್ ಮಾಡಿದ್ದಾರೆ ಗೊತ್ತಿಲ್ಲ. ಎಲ್ಲ ಕಡೆ ತನಿಖೆ ಮಾಡುವ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.

ಒಂದೇ ಒಂದು ಮನೆ ಕೊಟ್ಟಿಲ್ಲ

ಬಿಜೆಪಿ ಅವಧಿಯಲ್ಲಿ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು. ಬಿಜೆಪಿ ಅವಧಿಯಲ್ಲಿ ಎಲ್ಲ ಇಲಾಖೆಗಳಲ್ಲೂ ತನಿಖೆ ಮಾಡಬೇಕಿದೆ. ಎಲ್ಲ ಇಲಾಖೆಗಳಲ್ಲೂ ತನಿಖೆ ಆಗಬೇಕು ಅಂತ ಸಿಎಂ ಸಹ ಹೇಳಿದ್ದಾರೆ. ವಸತಿ ಯೋಜನೆಯಲ್ಲಿ ಸ್ಲಂ ಬೋರ್ಡ್ ಮೂಲಕ ಒಂದೇ ಒಂದು ಮನೆ ಕೊಟ್ಟಿಲ್ಲ. ನಮ್ಮ ಪ್ರಣಾಳಿಕೆ ಪ್ರಕಾರ ಪ್ರತೀ ವರ್ಷ ಮನೆಗಳ ಹಂಚಿಕೆಗೆ ನಿರ್ಧಾರ ಆಗಿದೆ ಎಂದು ಹೇಳಿದ್ದಾರೆ.

ಮಾಜಿ ಸಚಿವ ವಿ. ಸೋಮಣ್ಣ ಅವರು ವಸತಿ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. ಆದ್ರೆ, ಅವರು ಬಡವರಿಗೆ ಮನೆಗಳನ್ನು ಕೊಟ್ಟಿಲ್ಲ. ಮನೆಗಳನ್ನು ಕೊಡಬೇಕಿತ್ತು, ಕೊಟ್ಟಿಲ್ಲ ಎಂದು ಜಮೀರ್ ಅಹಮದ್ ಆರೋಪ ಮಾಡಿದ್ದಾರೆ.

Exit mobile version