Site icon PowerTV

ಮೀನು ತಿಂದ್ರೆ ಐಶ್ವರ್ಯಾ ರೈ ರೀತಿ ಆಗ್ತೀರಿ : ಸಚಿವರ ವಿವಾದಾತ್ಮಕ ಹೇಳಿಕೆ

ಬೆಂಗಳೂರು : ಮಹಾರಾಷ್ಟ್ರದ ಏಕನಾಥ್​ ಶಿಂಧೆ ಸಂಪುಟದ ಬುಡಕಟ್ಟು ಅಭಿವೃದ್ಧಿ ಸಚಿವ ಡಾ. ವಿಜಯ್ ಕುಮಾರ್ ಗವಿತ್ ಅವರು ಐಶ್ವರ್ಯಾ ರೈ ಕುರಿತು ವಿವಾದಾತ್ಮಕ ಹೇಳಿಕೆ ಹರಿಬಿಟ್ಟಿದ್ದಾರೆ.

‘ನಟಿ ಐಶ್ವರ್ಯಾ ರೈ ಮೀನು ತಿನ್ನುತ್ತಿದ್ದರು. ಆದ್ದರಿಂದ ಅವರ ಕಣ್ಣುಗಳು ಮತ್ತು ಚರ್ಮವು ಸುಂದರವಾಗಿದೆ. ಮೀನು ತಿನ್ನುವ ಮೂಲಕ ನಿಮ್ಮ ಕಣ್ಣುಗಳನ್ನು ಸುಂದರವಾಗಿಸಿಕೊಳ್ಳಿ’ ಎಂದು ವಿಜಯ್ ಕುಮಾರ್ ಗವಿತ್ ಹೇಳಿಕೆ ನೀಡಿದ್ದಾರೆ.

‘ನೀವು ಐಶ್ವರ್ಯಾ ರೈ ಅವರನ್ನು ನೋಡಿದ್ದೀರಾ? ಅವರು ಪ್ರತಿ ದಿನ ಮೀನು ತಿನ್ನುತ್ತಿದ್ದರು. ಅವರ ಕಣ್ಣುಗಳನ್ನು ನೋಡಿದ್ದೀರಾ? ಮೀನು ತಿನ್ನುವುದರಿಂದ ಎರಡು ಪ್ರಯೋಜನಗಳಿವೆ. ಮಹಿಳೆಯರು ಸ್ಲಿಮ್​ ಆಗುತ್ತಾರೆ ಮತ್ತು ಆಕರ್ಷಕವಾಗಿ ಕಾಣುತ್ತಾರೆ. ಮೀನಿನಲ್ಲಿ ಇರುವ ಒಂದು ತೈಲದಿಂದ ಇದು ಸಾಧ್ಯ. ನಿಮ್ಮ ಕಣ್ಣು ಮತ್ತು ತ್ವಚೆ ಕಾಂತಿಯುತವಾಗಿ ಕಾಣುತ್ತವೆ’ ಎಂದು ವ್ಯಾಖ್ಯಾನ ಮಾಡಿದ್ದಾರೆ.

ಶಿಂಧೆ ಸಂಪುಟದ ಸಚಿವರು, ಶಾಸಕರು ಸದಾ ಒಂದಿಲ್ಲೊಂದು ಕಾರಣಕ್ಕೆ ಚರ್ಚೆಯಲ್ಲಿ ಇರ್ತಾರೆ. ಇತ್ತೀಚೆಗೆ ಶಾಸಕ ಭರತ್ ಗೋಗವ್ಲೆ ಅವರು ಶಾಸಕರಿಗೆ ಸಚಿವ ಸ್ಥಾನ ಹೇಗೆ ಸಿಕ್ತು ಅನ್ನೋದನ್ನು ಬಹಿರಂಗಪಡಿಸಿ ಶಿಂಧೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಇದೀಗ, ಸಚಿವ ಡಾ. ವಿಜಯ್ ಕುಮಾರ್ ಗವಿತ್ ಹೇಳಿಕೆ ಮುಜುಗರ ತಂದಿದೆ.

Exit mobile version