Site icon PowerTV

ಈದ್ ಮಿಲಾದ್ ವಿಚಾರಕ್ಕೆ ಹರಿದ ನೆತ್ತರು : ಹಾಡಹಗಲೇ ಯುವಕನ ಬರ್ಬರ ಹತ್ಯೆ

ಶಿವಮೊಗ್ಗ : ಈದ್ ಮಿಲಾದ್ ಹಬ್ಬದ ವಿಚಾರಕ್ಕೆ ಶಿಕಾರಿಪುರದಲ್ಲಿ ಹಾಡಹಗಲೇ ಯುವಕನೊಬ್ಬನ ನೆತ್ತರು ಹರಿದಿದೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಕೆಹೆಚ್‌ಬಿ ಕಾಲೋನಿಯಲ್ಲಿ ಎರಡು ಗುಂಪುಗಳ ಗಲಾಟೆಯಾಗಿದ್ದು, ಈ ವೇಳೆ ಯುವಕನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ‌. ಜಾಫರ್(32) ಕೊಲೆಯಾದ ಯುವಕ.

ಈದ್ ಮಿಲಾದ್ ಹಬ್ಬದ ವಿಚಾರಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದವರ ಸಭೆ ಇಂದು ನಡೆದಿತ್ತು. ಈ ವಿಚಾರವಾಗಿ ಸಮಿತಿ ಸದಸ್ಯರ ನಡುವೆ ಪರಸ್ಪರ ಮಾತಿಗೆ ಮಾತು ಬೆಳೆದು ಏಕಾಏಕೀ ಸೊಸೈಟಿ ಕೇರಿಯ ಮುಸ್ಲಿಂ ಯುವಕರು, ಜಾಫರ್ ಎಂಬುವವನ ಹತ್ಯೆ ಮಾಡಿದ್ದಾರೆ.

ಜಾಫರ್ ಎದೆಗೆ ಚಾಕುವಿಂದ ಇರಿದ ಪರಿಣಾಮ ಜಾಫರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಇನ್ನು ಸ್ಥಳಕ್ಕೆ ಎಸ್.ಪಿ. ಮಿಥುನ್ ಕುಮಾರ್, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.

Exit mobile version