Site icon PowerTV

ಕಾಂಗ್ರೆಸ್ ಬಂದಾಗಿನಿಂದ ರಾಜ್ಯ ಕತ್ತಲೆಯಲ್ಲಿದೆ : ಸಿ.ಟಿ. ರವಿ

ಬೆಂಗಳೂರು : ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದು ಮೂರು ತಿಂಗಳು ಕಳೆದಿದೆ. ಮೂರು ತಿಂಗಳಲ್ಲಿ ಬೆಲೆ ಏರಿಕೆ ಬರೆ, ವಿದ್ಯುತ್ ಬೆಲೆ ದುಪ್ಪಟ್ಟು ಎಂಬ ಉಡುಗೊರೆಯನ್ನು ರಾಜ್ಯಕ್ಕೆ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಪವರ್ ಕಟ್ ಹೆಚ್ಚಾಗಿದೆ. ಸಿಂಗಲ್ ಫೇಸ್ ಕೊಡದ ಪರಿಸ್ಥಿತಿಯಲ್ಲಿ ಸರ್ಕಾರವಿದೆ. ರಾಜ್ಯವನ್ನು ಕತ್ತಲೆಗೆ ದೂಡುತ್ತಿದೆ. ಕತ್ತಲೆಯಲ್ಲಿ ಕರ್ನಾಟಕವಿದೆ ಎಂದು ಕುಟುಕಿದ್ದಾರೆ.

ಇನ್ನು ಶಾಸಕರು ಮತ್ತು ಮಂತ್ರಿಗಳ ನಡುವೆ ವರ್ಗಾವಣೆಗಾಗಿ ಗಲಾಟೆ ನಡೆಯುತ್ತಿದೆ. ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರದಲ್ಲಿ ತೊಡಗಿದೆ. SCP, TSP ಹಣವನ್ನು ವರ್ಗಾವಣೆ ಮಾಡಿಕೊಂಡಿದೆ. ಈ ಎಲ್ಲಾ ವಿಚಾರಗಳನ್ನು ಇಟ್ಕೊಂಡು ಸೆಪ್ಟೆಂಬರ್ 28ರಂದು ಬೆಂಗಳೂರಿನಲ್ಲಿ ಸಮಗ್ರ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಕಾಂಗ್ರೆಸ್ ಶಾಸಕರೆ ಸರ್ಕಾರದ ವಿರುದ್ದ ಪತ್ರ ಬರೆದಿದ್ದಾರೆ. ಇದೆಲ್ಲವನ್ನೂ ಜನರ ಮುಂದಿಡಲು ಪ್ರಯತ್ನ ಮಾಡುತ್ತೇವೆ ಎಂದು ಸಿ.ಟಿ. ರವಿ ಹೇಳಿದ್ದಾರೆ.

Exit mobile version