Site icon PowerTV

ಬಾರ್ ಎದುರು ತಮಟೆ ಬಾರಿಸಿ ಟ್ಯಾಕ್ಸ್ ವಸೂಲಿ

ವಿಜಯಪುರ : ವಿಜಯಪುರದಲ್ಲಿ ಪುರಸಭೆ ಅಧಿಕಾರಿಗಳಿಂದ ವಿನೂತನ ರೀತಿಯಲ್ಲಿ ಟ್ಯಾಕ್ಸ್ ವಸೂಲಿ ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ಟ್ಯಾಕ್ಸ್ ಬಾಕಿ ಉಳಿಸಿಕೊಂಡಿದ್ದ ಬಾರ್ ಎದುರು ತಮಟೆ ಬಾರಿಸಿ ಕರ ವಸೂಲಿಗೆ ಅಧಿಕಾರಿಗಳು ಮುಂದಾಗಿದ್ದಾರೆ.

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದ ಪಲ್ಲವಿ ಬಾರ್ ಆಂಡ್ ರೆಸ್ಟೋರೆಂಟ್​ನಿಂದ ಬಾಕಿ ವಸೂಲಿಗೆ ಪುರಸಭೆಯಿಂದ ಸರ್ಕಸ್ ಮಾಡುತ್ತಿದೆ. ಬಾರ್ ಮಾಲೀಕ ಹಾಗೂ ಪುರಸಭೆ ಅಧಿಕಾರಿಗಳ ನಡುವೆ ವಾಗ್ವಾದ ನಡೆದಿದೆ.

ತಮಟೆ ಬಾರಿಸಿ ವಸೂಲಿಗೆ ಮುಂದಾಗಿದ್ದಕ್ಕೆ ಬಾರ್ ಮಾಲೀಕ ಕರಭಂಟನಾಳ ಗರಂ ಆಗಿದ್ದಾರೆ. ಈ ವೇಳೆ ಪುರಸಭೆ ಅಧಿಕಾರಿಗಳ ಜೊತೆಗೆ ಬಾರ್ ಮಾಲೀಕ ವಾಗ್ವಾದಕ್ಕಿಳಿದಿದ್ದಾರೆ. ಪುರಸಭೆಗೆ ನೀಡಬೇಕಿದ್ದ 35 ಲಕ್ಷ ರೂಪಾಯಿಯನ್ನು ಪಲ್ಲವಿ ಬಾರ್ ಮಾಲೀಕ ಬಾಕಿ ಉಳಿಸಿಕೊಂಡಿದ್ದಾರೆ. ಕಳೆದ 15 ವರ್ಷಗಳಿಂದ 35 ಲಕ್ಷ ಬಿಲ್ಡಿಂಗ್ ಕರ ಹಾಗೂ 29 ಸಾವಿರ ನೀರಿನ ಕರ ಬಾಕಿ ಉಳಿಸಿಕೊಂಡಿದೆ.

Exit mobile version