Site icon PowerTV

ಬಾಗಲಕೋಟೆಯಲ್ಲಿ ಡಿಹೆಚ್ಓ ಖುರ್ಚಿಗೆ ಹೈಡ್ರಾಮಾ

ಬಾಗಲಕೋಟೆ : ಜಿಲ್ಲಾ ಡಿಹೆಚ್ಓ (ಜಿಲ್ಲಾ ವೈದ್ಯಾಧಿಕಾರಿ) ಹುದ್ದೆಗೆ ಖುರ್ಚಿ‌ ಕಿತ್ತಾಟ ನಿಲ್ಲುತ್ತಿಲ್ಲ. ಡಿಹೆಚ್ಓ ಕಚೇರಿಯಲ್ಲಿಯೇ ಹೈಡ್ರಾಮಾ ನಡೆದಿದೆ.

ಬಾಗಲಕೋಟೆ ಶಾಸಕ‌ ಹೆಚ್.ವೈ ಮೇಟಿ ಅಳಿಯ ಡಾ. ರಾಜಕುಮಾರ್ ಯರಗಲ್ ಹಾಗೂ ಡಾ ಜಯಶ್ರೀ ಎಮ್ಮಿ ಮಧ್ಯೆ ಕಿತ್ತಾಟ ನಡೆದಿದೆ. ಬಾಗಲಕೋಟೆ ಡಿ ಹೆಚ್ಓ ನೇಮಕ ಆದೇಶ ಹಿಡಿದು ರಾಜಕುಮಾರ ಯರಗಲ್ ಬಂದಿದ್ದಾರೆ. ಅದಕ್ಕೆ ಕೆಎಟಿಯಿಂದ ಡಾ ಜಯಶ್ರಿ ಎಮ್ಮಿ ತಡೆಯಾಜ್ಞೆ ತಂದಿದ್ದಾರೆ. ಒಂದೇ ಕಛೇರಿಯಲ್ಲಿ ಇಬ್ಬರೂ ವಾಗ್ವಾದ ನಡೆದಿದೆ.

ಹಾಜರಾತಿ ಹಾಕಲು ಜಯಶ್ರೀ ಎಮ್ಮಿ ಮುಂದಾಗಿದ್ದಾರೆ. ಹಾಜರಾತಿ ಪುಸ್ತಕ‌ವನ್ನು ರಾಜಕುಮಾರ ಯರಗಲ್, ನಾನು ಸರ್ಕಾರದ ಆದೇಶದ ಪ್ರಕಾರ ಅಧಿಕಾರ ವಹಿಸಿಕೊಂಡಿದ್ದೇನೆ ಎಂದು ವಾದ ಮಾಡಿದ್ದಾರೆ. ನಾನು ಕೆಎಟಿಯಿಂದ ಸ್ಟೆ ತಂದಿದ್ದೇನೆ ಎಂದು ಜಯಶ್ರೀ ಎಮ್ಮಿ ವಾದ ಮಾಡಿದ್ದಾರೆ. ಕಚೇರಿಯಲ್ಲಿ ಇಬ್ಬರಿಗೂ ವಾಗ್ವಾದ ನಡೆದಿದೆ.

Exit mobile version