Site icon PowerTV

ಬಿಚ್ಚುತ್ತಾರೋ, ಬಿಡ್ತಾರೋ ನೋಡೋಣ : ಡಿ.ಕೆ ಶಿವಕುಮಾರ್

ಬೆಂಗಳೂರು : ನೈಸ್ ರಸ್ತೆ ದಾಖಲೆ ಬಿಡುಗಡೆ ‌ಹಾಗೂ ಹೋರಾಟ ಮಾಡುವುದಾಗಿ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ವಿಚಾರದ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕುಮಾರಸ್ವಾಮಿಯವರನ್ನು ತಡೆದಿರೋರು‌ ಯಾರು? ದಾಖಲೆಗಳನ್ನು‌ ಬಿಡಲಿ ಎಂದು ಕುಟುಕಿದ್ದಾರೆ.

ಅವರು ಹಿಂದೆ ಅಧಿಕಾರದಲ್ಲಿ‌ ಇದ್ರಲ್ವಾ? ತನಿಖೆ ಮಾಡಿಸಬಹುದಿತ್ತಲ್ವಾ? ನ್ಯೂಸ್ ಅಲ್ಲಿ  ಇರಬೇಕಲ್ವಾ ಅದಕ್ಕೆ ಮಾತಾಡ್ತಾರೆ. ನಾನು ಎಷ್ಟು ಹೆದರುತ್ತಿನಿ, ಎಷ್ಟು ಹೆದರಲ್ಲ ಅಂತ ಗೊತ್ತಿದೆ. ಬಿಚ್ಚುತ್ತಾರೋ, ಬಿಡುತ್ತಾರೋ ನೋಡೋಣ ಎಂದು ಚಾಟಿ ಬೀಸಿದ್ದಾರೆ.

ರೈತರಿಗೆ ಉತ್ತರ ಕೊಡುತ್ತೇನೆ

ನಾವು ತಮಿಳುನಾಡಿಗೆ ಹೆಚ್ಚು ನೀರು ಬಿಟ್ಟಿಲ್ಲ. ನೀರು ಬಿಡದಿರೋದಕ್ಕೆ ಅವರು ಕೋರ್ಟ್ ಗೆ ಹೋಗಿದ್ದು. ನಾನು ಕೋರ್ಟ್ ಗೆ, ರೈತರಿಗೆ ಉತ್ತರ ಕೊಡುತ್ತೇನೆ. ನಾನು ಏನು ಮಾತಾಡಿದ್ರೂ ಕೋರ್ಟ್ ಗೆ ಕೊಡ್ತಾರೆ. ಅದಕ್ಕೆ ನೀರು ಬಿಟ್ಟಿರೋ ಡಿಟೈಲ್ಸ್ ಟ್ವೀಟ್ ಮಾಡುತ್ತೇನೆ ಎಂದು ಕುಮಾರಸ್ವಾಮಿಗೆ ತಿರುಗೇಟು ಕೊಟ್ಟಿದ್ದಾರೆ.

Exit mobile version