Site icon PowerTV

ದರ್ಶನ್ ಮಗು ತರ.. ಕೆಣಕಿದ್ರೆ ಫೈಯರ್ ಫಿಕ್ಸ್ : ರವಿಚಂದ್ರನ್

ಬೆಂಗಳೂರು : ‘ದರ್ಶನ್​ನ ಕೆಣಕಬಾರದು.. ಕೆಣಕಿದ್ರೆ ಫೈಯರ್ ಆಗುತ್ತದೆ ಅಷ್ಟೇ.. ಅದು ನಾನು ಅವನನ್ನು ನೋಡಿ ಅರ್ಥ ಆಗಿರೋದು’ ಎಂದು ನಟ ದರ್ಶನ್ ವ್ಯಕ್ತಿತ್ವದ ಬಗ್ಗೆ ಕ್ರೇಜಿಸ್ಟಾರ್ ಡಾ.ವಿ. ರವಿಚಂದ್ರನ್ ವಿವರಿಸಿದರು.

ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ರವಿಚಂದ್ರನ್ ಅವರು ದರ್ಶನ್ ಬಗ್ಗೆ ಮಾತನಾಡಿರುವ ಮಾತುಗಳು ಇದೀಗ ವೈರಲ್ ಆಗುತ್ತಿದೆ.

ಜ್ಯೂನಿಯರ್ ದರ್ಶನ್ ಎಂದೇ ಗುರುತಿಸಿಕೊಂಡಿರುವ ಅವಿನಾಶ್ ಈ ವಾರ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಬಂದಿದ್ದರು. ಥೇಟ್ ದರ್ಶನ್ ಸ್ಟೈಲ್‌ನಲ್ಲಿ ಗಮನ ಸೆಳೆದರು. ಈ ವೇಳೆ ದರ್ಶನ್ ಕುರಿತು ಮಾತು ಆರಂಭಿಸಿದ ರವಿಚಂದ್ರನ್ ಅವರು, ‘ದರ್ಶನ್ ಹೆಂಗೆ ಅಂದ್ರೆ ಸುಮ್ಮನಿದ್ದರೆ ಬಹಳ ವಿನಯ ಅವನು. ಇಲ್ಲದಿದ್ರೆ, ಅದಕ್ಕೆ ವಿರುದ್ಧ ಅಷ್ಟೇ.. ಸುಮ್ಮನೆ ಬಿಟ್ಟರೆ ಅವನ ಪಾಡಿಗೆ ಮಗು ತರ ಹೋಗ್ತಾ ಇರ್ತಾನೆ, ಅವನ ಕೆಲಸ ಮಾಡ್ಕೊಂಡು. ಅವನನ್ನು ಕೆದಕಬಾರದು.. ಕೆಣಕಬಾರದು’ ಎಂದಿದ್ದಾರೆ.

ಕರ್ನಾಟಕದಲ್ಲಿ ಯಾರು ಇಲ್ಲ

ಯಾಕಂದ್ರೆ, ‘ನಾನು ಎರಡು ಚಿತ್ರದಲ್ಲಿ ದರ್ಶನ್ ಜೊತೆಗೆ ನಟಿಸಿದ್ದೇನೆ. ನಾನು ಯಾವಾಗಲೂ ಹೇಳ್ತಾ ಇರ್ತೀನಿ. ನೀನು ಯಾವಾಗಲೂ ದುರ್ಯೋಧನ, ರಾವಣ ರೀತಿಯ ಪೌರಾಣಿಕ ಪಾತ್ರ ಮಾಡು ಅಂತ. ಸದ್ಯಕ್ಕೆ ನಿನ್ನ ಬಿಟ್ಟರೆ ಇಂತಹ ಪಾತ್ರ ಮಾಡಲು ಕರ್ನಾಟಕದಲ್ಲಿ ಯಾರು ಇಲ್ಲ ಅಂತ. ಡಾ. ರಾಜ್‌ಕುಮಾರ್ ಬಿಟ್ಟರೆ ಪೌರಾಣಿಕ ಪಾತ್ರಗಳಲ್ಲಿ ಬೇರೆ ಯಾರನ್ನು ನೋಡೋಕೆ ಆಗಲಿಲ್ಲ. ಮತ್ತೆ ಅಂತಹ ಪರ್ಸನಾಲಿಟಿ ಬೇಕು ಅಂದ್ರೆ ದರ್ಶನ್ ಒಬ್ಬನೇ ಇರೋದು’ ಎಂದು ಹಾಡಿ ಹೊಗಳಿದ್ದಾರೆ.

Exit mobile version