Site icon PowerTV

ಕೇಕ್, ಹಾರ ತರಬೇಡಿ.. ಫ್ಯಾನ್ಸ್​ಗೆ ಡಾಲಿ ಧನಂಜಯ ಮನವಿ

ಬೆಂಗಳೂರು : ನಾಲ್ಕು ವರ್ಷಗಳಿಂದ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದ ನಟ ಡಾಲಿ ಧನಂಜಯ, ಈ ಬಾರಿ ಬಹಳ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಫ್ಯಾನ್ಸ್ ಜೊತೆ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ಳಲಿದ್ದಾರೆ. ಖುದ್ದು ಡಾಲಿಯೇ ಅಭಿಮಾನಿಗಳಿಗೆ ಧನಂಜಯ ಅವರು ಆಮಂತ್ರಣ ನೀಡಿದ್ದಾರೆ.

ಕೊರೋನಾ ಹಾಗೂ ನಟ ಪುನೀತ್ ರಾಜ್​ಕುಮಾರ್ ಅಗಲಿಕೆಯಿಂದ ಬರ್ತ್ ಡೇಗಳಿಗೆ ಸ್ಯಾಂಡಲ್​ವುಡ್ ನಟರು ಬ್ರೇಕ್ ಹಾಕಿದ್ದರು. ಇದೀಗ ಅದ್ದೂರಿ ಸಂಭ್ರಮಾಚರಣೆಗೆ ಮುನ್ನುಡಿ ಬರೆಯುತ್ತಿದ್ದಾರೆ. ರಿಷಬ್ ಶೆಟ್ಟಿ ಬಳಿಕ ಅದೇ ನಂದಿ ಲಿಂಕ್ಸ್ ಗ್ರೌಂಡ್​​ನಲ್ಲಿ ಧನಂಜಯ ಕೂಡ ಈ ಬಾರಿಯ ಬರ್ತ್ ಡೇನ ಸೆಲೆಬ್ರೇಟ್ ಮಾಡಿಕೊಳ್ಳೋಕೆ ಮುಂದಾಗಿದ್ದಾರೆ.

ಫ್ಯಾನ್ಸ್ ಹಾಗೂ ಹಿತೈಷಿಗಳ ಜೊತೆ ಎರಡು ದಿನಗಳ ಕಾಲ ಸಮಯ ಕಳೆಯಲು ಧನಂಜಯ ಅವರು ನಿರ್ಧರಿಸಿದ್ದಾರೆ. ಇದೇ ಆಗಸ್ಟ್ 23ಕ್ಕೆ 37 ತುಂಬಿ 38ನೇ ವರ್ಷಕ್ಕೆ ಪಾದಾರ್ಪಣೆ ಮಾಡಲಿರುವ ಡಾಲಿ, ಆಗಸ್ಟ್ 22ರ ರಾತ್ರಿ 11 ಗಂಟೆಯಿಂದಲೇ ಫ್ಯಾನ್ಸ್​ಗಾಗಿ ಸಮಯ ಮೀಸಲಿಟ್ಟಿದ್ದಾರೆ. ಆ.23ರ ಬೆಳಗ್ಗೆ 11ರಿಂದ ಮಧ್ಯಾಹ್ಮ 1 ಗಂಟೆಯವರೆಗೆ ಸೆಲೆಬ್ರೇಷನ್​ಗೆ ಸಾಕ್ಷಿ ಆಗಲಿದ್ದಾರೆ. ಕೇಕ್, ಹಾರ ತರದೆ ಬನ್ನಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

Exit mobile version