Site icon PowerTV

ಬಿಜೆಪಿ, ಜೆಡಿಎಸ್ ಸಂಪೂರ್ಣ ಖಾಲಿಯಾಗುತ್ತೆ : ಶಿವರಾಜ್ ತಂಗಡಗಿ

ಮೈಸೂರು : ಬಿಜೆಪಿ ಹಾಗೂ ಜೆಡಿಎಸ್​ನಿಂದ ಅತಿ ಹೆಚ್ಚು ಶಾಸಕರು ಬರುತ್ತಾರೆ. ಆದರೆ, ಯಾರೂ ಸಹ ಬಿಜೆಪಿ ತರ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಗೆ ಬರ್ತಾ ಇಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಹೇಳಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಈ ರಾಜ್ಯದಲ್ಲಿ ಒಳ್ಳೆ ಕೆಲಸಗಳನ್ನು ಕಾಂಗ್ರೆಸ್ ಪಕ್ಷ ಮಾಡ್ತಾ ಇದೆ. ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಸಲುವಾಗಿ ಸಿದ್ದರಾಮಯ್ಯ ಒಳ್ಳೆ ಆಡಳಿತ ನೀಡ್ತಾ ಇದ್ದಾರೆ. ಹಾಗಾಗಿ, ಕಾಂಗ್ರೆಸ್​ಗೆ ಬರ್ತಾರೆ ಎಂದು ತಿಳಿಸಿದ್ದಾರೆ.

136 ಶಾಸಕರಿದ್ದೇವೆ, ಕಾಂಗ್ರೆಸ್ ಸರ್ಕಾರ ಭದ್ರವಾಗಿದೆ, ಆದ್ರೂ ನಮ್ಮ ಜೊತೆ ಬರ್ತಾ ಇದ್ದರೆ ಅಂದ್ರೆ ಕಾಂಗ್ರೆಸ್ ಗೆ ಶಕ್ತಿ ತುಂಬಲು ಬರ್ತಾ ಇದ್ದಾರೆ. ಬಿಜೆಪಿಗೆ ಹೋದವರು ಬರ್ತಾರೆ, ಬಿಜೆಪಿಯಲ್ಲಿ ಇದ್ದವರು ಬರ್ತಾರೆ. ನಾವು ಮನಸ್ಸು ಮಾಡಿ ಕರೆದುಕೊಂಡರೆ ಬಿಜೆಪಿ, ಜೆಡಿಎಸ್ ಸಂಪೂರ್ಣ ಖಾಲಿಯಾಗುತ್ತೆ ಎಂದಿದ್ದಾರೆ.

Exit mobile version