Site icon PowerTV

BJP-JDS ಶಾಸಕರು ಸಂಪರ್ಕದಲ್ಲಿ ಇದ್ದಾರೆ : ಸತೀಶ್ ಜಾರಕಿಹೊಳಿ

ಬೆಳಗಾವಿ : ವಲಸಿಗ ಶಾಸಕರ ಟೀಮ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ವಲಸಿಗ ಶಾಸಕರು ಬರುತ್ತಾರೆ ಅಂದ್ರೆ ತಗೋತಾರೆ. ಆದರೆ, ಅನಿವಾರ್ಯತೆ ಏನು ಇಲ್ಲ ಎಂದು ಹೇಳಿದ್ದಾರೆ.

ಬರ್ತಾರೆ, ಯಾವುದೋ ಸಂದರ್ಭದಲ್ಲಿ ಹೋಗಿದ್ದಿವಿ. ಈಗ ನಾವು ಬರ್ತಿವಿ‌ ಅಂದ್ರೆ ತಗೋತಾರೆ. ಅವರು(ಬಿಜೆಪಿ-ಜೆಡಿಎಸ್) ಕಾಂಗ್ರೆಸ್​ನವರು ಬಂದರೆ ಸ್ವಾಗತ ಮಾಡ್ತಿವಿ. ಯಾರು ಬರ್ತಾರೆ ಅನ್ನೋದು ಸಿಎಂ, ಪಕ್ಷದ ಅಧ್ಯಕ್ಷ ರಿಗೆ ಗೊತ್ತಿದೆ. ಉಳಿದವರಿಗೆ ಅಷ್ಟೊಂದು ಮಾಹಿತಿಯಿಲ್ಲ, ಈ ಬಗ್ಗೆ ಚರ್ಚೆ ನಡೆಯುತ್ತಿರುವುದು ನಮಗೆ ಗೊತ್ತಿದೆ ಎಂದು ತಿಳಿಸಿದ್ದಾರೆ.

ಸಂಪರ್ಕದಲ್ಲಿ ಇದ್ದಾರೆ

ಯಾರು ಬರ್ತಾರೆ, ಎಷ್ಟು ಜನ ಬರ್ತಾರೆ ಅನ್ನೋದು ಗೊತ್ತಿಲ್ಲ. ಬಿಜೆಪಿ, ಜೆಡಿಎಸ್ ಎರಡು ಪಕ್ಷದಿಂದಲೂ ಶಾಸಕರು ಬರ್ತಾರೆ, ಸಂಪರ್ಕದಲ್ಲಿ ಇದ್ದಾರೆ. ನಿರ್ದಿಷ್ಟವಾಗಿ ಎಷ್ಟು ಶಾಸಕರು ಬರ್ತಾರೆ ಅನ್ನೋದು ಗೊತ್ತಿಲ್ಲ. ಪಕ್ಷದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಅಂತಿಮವಾಗಿ ತೀರ್ಮಾನ ತಗೋಬೇಕು. ಅವರೇ ತೀರ್ಮಾನ ಮಾಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಾರೆ ಎಂದು ಆಪರೇಷನ್ ಹಸ್ತದ ಸುಳಿವು ನೀಡಿದ್ದಾರೆ.

Exit mobile version