Site icon PowerTV

ಮಹಿಳೆಗೆ ಸಿಎಂ ಆಗುವ ಯೋಗ ಬರಲಿದೆ : ಕೋಡಿಶ್ರೀ ಭವಿಷ್ಯ

ಬೆಳಗಾವಿ : ಕಾಂಗ್ರೆಸ್​ ಸರ್ಕಾರದ ಉಳಿವು ಹಾಗೂ ರಾಜ್ಯ ರಾಜಕಾರಣದ ಬಗ್ಗೆ ಕೋಡಿಮಠದ ಡಾ. ಶಿವಾನಂದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿರುವ ಅವರು, ರಾಜಕಾರಣದ ಬಗ್ಗೆ ಏನೂ ಹೇಳಲ್ಲ. ಆದರೆ, ರಾಜ್ಯ ಸರ್ಕಾರಕ್ಕೆ‌ ತೊಂದರೆಯಿಲ್ಲ. ಪಕ್ಷಾಂತರ ಬಗ್ಗೆಯೂ‌ ಚುನಾವಣೆ ಪೂರ್ವವೇ ಹೇಳಿದ್ದೆ. ರಾಜಕೀಯ ಅಲ್ಲೋಲ, ಕಲ್ಲೋಳ ಆಗಲಿದೆ ಅಂತ ಹೇಳಿದ್ದೆ. ಈಗ ಅಸ್ಥಿರತೆ ಉಂಟಾಗುತ್ತಿದೆ ಎಂದು ಹೇಳಿದ್ದಾರೆ.

ಈ ರಾಜ್ಯಕ್ಕೆ ಮಹಿಳಾ ಮುಖ್ಯಮಂತ್ರಿ ಆಗುವ ಯೋಗ ಇದೆಯೇ? ಎಂಬ ಸುದ್ದಿಗಾರರ ಪ್ರಶ್ನೆಗೆ, ಇವರದ್ದು ಮುಗಿಲಿ, ಎಲ್ಲವನ್ನೂ ಕಿತ್ತುಕೊಳ್ಳುತ್ತಿದ್ದಾರೆ. ಒಮ್ಮೆ ಮಹಿಳೆಯರಿಗೆ ಸಿಎಂ ಆಗುವ ಯೋಗ ಬರಲಿದೆ, ಅವರಿಗೂ ಅವಕಾಶ ಸಿಗಲಿ. ಹಣದ ಹಿಂದೆ ಮನುಷ್ಯ ಹೋಗದೇ ದೈವದ ಹಿಂದೆ ಹೋಗಬೇಕು ಎಂದು ಸ್ವಾಮೀಜಿ ಸಲಹೆ ನೀಡಿದ್ದಾರೆ.

ಆಪತ್ತು, ಸಾವುಗಳು ಸಂಭವಿಸುತ್ತೆ

ಮುಂಬರುವ ಲೋಕಸಭಾ ಚುನಾವಣೆ ಫಲಿತಾಂಶ ಬಗ್ಗೆ ಮಾತನಾಡಿರುವ ಅವರು, ಫಲಿತಾಂಶದ ಬಗ್ಗೆ ಹೇಳಲು ಇನ್ನೂ ಸಮಯವಿದೆ, ನೋಡಿ ಹೇಳುತ್ತೇವೆ. ದೈವದ ಬಲ ಮನುಷ್ಯನಿಗೆ ಮುಖ್ಯವಾಗಿಬೇಕು. ಯಾರು ದೈವ ನಂಬುತ್ತಾನೇಯೋ ಅಂಥವರಿಗೆ ತೊಂದರೆಯಿಲ್ಲ. ಇಲ್ಲವಾದರೆ ಆಪತ್ತು, ಸಾವುಗಳು ಸಂಭವಿಸುತ್ತವೆ ಎಂದು ಕೋಡಿಶ್ರೀ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

Exit mobile version