Site icon PowerTV

ಗೆಳೆಯನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಸ್ನೇಹಿತ ಸಾವು

ಶಿವಮೊಗ್ಗ : ಇದೆಂಥಾ ಅನ್ಯಾಯ? ಇದು ಕಾಕತಾಳಿಯವೋ, ವಿಧಿ ಲಿಖಿತವೋ ಗೊತ್ತಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಮನಕಲುಕುವ ದಾರುಣ ಘಟನೆಯೊಂದು ನಡೆದಿದೆ.

ನಿನ್ನೆ ರಾತ್ರಿ ಶಿಕಾರಿಪುರ ಹಾಗೂ ಶಿರಾಳಕೊಪ್ಪ ನಡುವಿನ ಕೆಎಸ್ಸಾರ್ಟಿಸಿ ಡಿಪೋ ಬಳಿ ಎರಡು ಬೈಕ್​ಗಳ ನಡುವೆ ಅಪಘಾತ ಸಂಭವಿಸಿತ್ತು. ಈ ವೇಳೆ ಆನಂದ್ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದ.

ಇತ್ತ, ಆನಂದ್ ಸಾವಿನ ವಿಷಯ ತಿಳಿದ ಸ್ನೇಹಿತ ಸಾಗರ್ ಹೃದಯಾಘಾತಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ್ದಾನೆ. ಸ್ನೇಹಿತನ ಮೇಲಿನ ಪ್ರೀತಿಯೋ ಅಥವಾ ಸ್ನೇಹಿತ ಸಾವಿನ ಸುದ್ದಿಯ ಆಘಾತವೋ ಗೊತ್ತಿಲ್ಲ. ಇಬ್ಬರು ಸ್ನೇಹಿತರು ಈಗ ಬಾರದೂರಿನತ್ತ ಪಯಣ ಬೆಳೆಸಿದ್ದಾರೆ. ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡ ಎರಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಇಬ್ಬರು  ಳೆಯರು ಶಿಕಾರಿಪುರ ತಾಲೂಕಿನ ಪುಣೇದಹಳ್ಳಿ ನಿವಾಸಿಗಳು. ಇನ್ನೂ ಅಪಘಾತದಲ್ಲಿ ಆನಂದ್​ ಜೊತೆ ಬೈಕ್​ನಲ್ಲಿ ನಟರಾಜ್​ ಸ್ಥಿತಿ ಗಂಭೀರವಾಗಿದೆ. ಮತ್ತೊಂದು ಬೈಕ್​ನಲ್ಲಿದ್ದ ಜಾವಿದ್, ಮಲಿಕ್ ಇಬ್ಬರೂ ಗಂಭೀರ ಗಾಯಗೊಂಡಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಶಿಕಾರಿಪುರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version