Site icon PowerTV

ಕರಾಳ ಭಾನುವಾರ : 9 ಯೋಧರ ದುರಂತ ಸಾವು

ಬೆಂಗಳೂರು : ದೇಶಕ್ಕೆ ಇಂದು ಕರಾಳ ಭಾನುವಾರ! ಸೇನಾ ವಾಹನ ಕಂದಕಕ್ಕೆ ಉರುಳಿದ ಪರಿಣಾಮ 9 ಯೋಧರು ದುರಂತ ಸಾವನ್ನಪ್ಪಿರುವಂತಹ ಘಟನೆ ಲಡಾಖ್‌ನ ಲೇಹ್‌ ನಗರದಲ್ಲಿ ನಡೆದಿದೆ.

ಮತ್ತೊಬ್ಬ ಯೋಧನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಲಡಾಖ್‌ನ ನ್ಯೋಮಾದ ಕೆರೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯೋಧರ ಪಡೆ ಗ್ಯಾರಿಸನ್‌ನಿಂದ ಲೇಹ್ ಬಳಿ ಇರುವ ಕಯಾರಿ ಪ್ರದೇಶಕ್ಕೆ ಹೋಗುತ್ತಿರುವಾಗ ಸುಮಾರು 7 ಕಿ.ಮೀ ದೂರದಲ್ಲಿ ಸೇನಾ ವಾಹನ ಕಮರಿಗೆ ಬಿದ್ದಿದೆ. ಮೃತಪಟ್ಟ 9 ಯೋಧರ ಪೈಕಿ ಒಬ್ಬ ಜೂನಿಯರ್ ಕಮಿಷನ್ ಆಫೀಸರ್ ಸೇರಿ, ಒಟ್ಟು 34 ಸಿಬ್ಬಂದಿಯನ್ನು ಒಳಗೊಂಡ ಯೋಧರ ಪಡೆಯಾಗಿತ್ತು.

ಘಟನೆ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್​ ಟ್ವೀಟ್​ ಮಾಡಿದ್ದು, ಲಡಾಖ್‌ನ ಲೇಹ್ ಬಳಿ ಅಪಘಾತದಲ್ಲಿ ಭಾರತೀಯ ಸೇನೆಯ ಸಿಬ್ಬಂದಿಯನ್ನು ಕಳೆದುಕೊಂಡಿರುವುದು ದುಃಖವಾಗಿದೆ. ನಮ್ಮ ದೇಶಕ್ಕೆ ಅವರ ಆದರ್ಶ ಸೇವೆಯನ್ನು ನಾವು ಎಂದಿಗೂ ಮರೆಯುವುದಿಲ್ಲ. ಗಾಯಗೊಂಡ ಸಿಬ್ಬಂದಿಯನ್ನು ಫೀಲ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

Exit mobile version