Site icon PowerTV

ಕೊನೆಗೂ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಶಿವಮೊಗ್ಗ : ಕಳೆದ ಕೆಲದಿನಗಳ ಹಿಂದೆ ಮಹಿಳೆಯೋರ್ವಳನ್ನು ಕೊಂದು ಹಾಕಿದ್ದ ನರಹಂತಕ ಚಿರತೆ ಕೊನೆಗೂ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.

ಇದನ್ನೂ ಓದಿ: ಹಂದಿಗಳಿಗೆ ಆಫ್ರಿಕನ್​ ಜ್ವರ : ಎಲ್ಲಾ ಹಂದಿಗಳನ್ನು ಕೊಲ್ಲುವಂತೆ ಜಿಲ್ಲಾಡಳಿತ ಸೂಚನೆ!

ಕಳೆದ ಕೆಲ ದಿನಗಳ ಹಿಂದೆ ಶಿವಮೊಗ್ಗದ ಬಿಕ್ಕೋನಹಳ್ಳಿಯಲ್ಲಿ ಯಶೋಧಮ್ಮ ಎಂಬುವರರನ್ನ ಚಿರತೆ ಕೊಂದು ಹಾಕಿತ್ತು. ಜೊತೆಗೆ ಬೀರನಕೆರೆ ಬಳಿ ನಾಯಿಯನ್ನ ಕಚ್ಚಿ ಚಿರತೆ ಸಾಯಿಸಿತ್ತು. ಇದ್ರಿಂದ ಭಯಭೀತರಾಗಿದ್ದ ಸುತ್ತಮುತ್ತಲಿನ ಗ್ರಾಮಸ್ಥರು ನರಹಂತಕ ಚಿರತೆಯನ್ನ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.

ಅದರಂತೆ ಶುಕ್ರವಾರ ಬಿಕ್ಕೋನಹಳ್ಳಿಯಲ್ಲಿ ಕಂಡಿದ್ದ ಚಿರತೆ ಇಂದು ಅದೇ ಜಾಗದಲ್ಲಿ ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ. ಈ ಮೂಲಕ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಹೀಗೆ ಸೆರೆಯಾದ ಚಿರತೆಯನ್ನ ಅರಣ್ಯ ಇಲಾಖೆ ಸಿಬ್ಬಂದಿ ಲಯನ್‌ ಸಫಾರಿಗೆ ಕೊಂಡೊಯ್ದು ಬಿಟ್ಟಿದ್ದಾರೆ.

Exit mobile version