Site icon PowerTV

ಅಪ್ರಾಪ್ತ ಬಾಲಕಿ ಜೊತೆ ಶಿಕ್ಷಕ ವಿವಾಹ; ಆರೋಪಿ ವಿರುದ್ಧ ಎಫ್​ಐಆರ್​ ದಾಖಲು

ಬೀದರ್ : ಅಪ್ರಾಪ್ತ ವಿದ್ಯಾರ್ಥಿನಿಗೆ ಪುಸಲಾಯಿಸಿ ವಿವಾಹ ಮಾಡಿಕೊಂಡ ಶಿಕ್ಷಕನ ವಿರುದ್ಧ ಎಫ್​ಐಆರ್ ದಾಖಲಿಸಿದ ಪೋಲಿಸರು ಘಟನೆ ಭಾಲ್ಕಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

ಮೂಲತಃ ಬೆಳಗಾವಿ ಜಿಲ್ಲೆಯ ದಿಲೀಪ ಕುಮಾರ್ ಅಜೂರೆ ಎಂಬಾತ ಭಾಲ್ಕಿ ತಾಲೂಕಿನ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದನು. ಅದೇ ಶಾಲೆಯಲ್ಲಿ ಓದುತ್ತಿದ್ದ 15 ವರ್ಷದ ಒರ್ವ ವಿದ್ಯಾರ್ಥಿನಿಯನ್ನು ಪುಸಲಾಯಿಸಿದ ಶಿಕ್ಷಕ, ಬಾಲಕಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅವನ ಕೋಣೆಯಲ್ಲೇ ತಾಳಿ ಕಟ್ಟಿ ವಿವಾಹವಾಗಿರುವ ದಿಲೀಪ್ ಕುಮಾರ್.

ಇದನ್ನು ಓದಿ : ಹಾಸ್ಟೆಲ್ ವಾರ್ಡನ್ ನಿಯೋಜನೆ ರದ್ದು; ವಿರೋಧ ವ್ಯಕ್ತಪಡಿಸಿದ ಬಾಲಕಿಯರು

ದಿಲೀಪ ಕುಮಾರ್​ಗೆ ಈ ಮೊದಲೆ ಮದುವೆಯಾಗಿ ಒಂದು ಮಗು ಕೂಡ ಇತ್ತು.

ಆದ್ರು ಸಹ ವಿದ್ಯಾರ್ಥಿ ಮನೆಯಲ್ಲಿ ಬಾಡಿಗೆ ಉಳಿದುಕೊಂಡಿದ್ದ ಶಿಕ್ಷಕ, ಮಾರ್ಚ್ ತಿಂಗಳ ಬೇಸಿಗೆ ರಜೆ ಸಂದರ್ಭದಲ್ಲಿ ಯಾರಿಗೂ ಗೊತ್ತಿಲ್ಲದೆ ಮದುವೆಯಾಗಿ ಊರಲ್ಲೇ ಠಿಕಾಣಿ ಹೂಡಿದ್ದ. ಬಳಿಕ ಜೂನ್ ತಿಂಗಳ ಪ್ರಾರಂಭದಲಿ ಶಿಕ್ಷಕನ ಮದುವೆ ಪುರಾಣ ಬೆಳಕಿಗೆ ಬಂದಿದೆ.

ಈ ಕುರಿತು ಮೇಹಕರ ಪೋಲಿಸ್ ಠಾಣೆಯಲ್ಲಿ ದಿಲೀಪ ಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಶಿಕ್ಷಕನಿಗೆ ಶಾಲೆಯಿಂದ ಅಮಾನತು ಬದಲು ವಜಾ ಮಾಡಬೇಕೆಂದು ಊರಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Exit mobile version