Site icon PowerTV

ಕಾರಾಗೃಹದ ಮೇಲೆ ದಾಳಿ ; ಬರೊಬ್ಬರಿ 17 ಮೊಬೈಲ್ ವಶಕ್ಕೆ ಪಡೆದ ಪೋಲಿಸರು

ಹಾಸನ : ಆರೋಪಿಗಳ ಚಟುವಟಿಕೆಯನ್ನು ಗಮನಿಸಿ ಜಿಲ್ಲೆಯ ಕಾರಾಗೃಹದ ಮೇಲೆ ದಾಳಿ ನಡೆಸಿದ ಪೋಲಿಸರು ನಗರದ ಬಿಎಂ ರಸ್ತೆಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.

ಕಾರಾಗೃಹದಲ್ಲಿ ಆರೋಪಿಗಳ ವಿಚಿತ್ರ ವರ್ತನೆಯಿಂದ ಹಾಗೂ ಅವರ ಚಟುವಟಿಕೆಗಳನ್ನು ಗಮನಿಸಿದ ಪೋಲಿಸರು. ನಿನ್ನೆ ಮಧ್ಯರಾತ್ರಿ ಖಚಿತ ಮಹಿತಿಯೊಂದಿಗೆ ದಿಢೀರ್ ದಾಳಿ ನಡೆಸಿದ್ದಾರೆ. ದಾಳಿ ನಡೆದ ವೇಳೆ ಆರೋಪಿಗಳ ಹತ್ತಿರ ಇದ್ದ ಬರೊಬ್ಬರಿ 17 ಮೊಬೈಲ್ ವಶಕ್ಕೆ ಪಡೆದ ಪೋಲಿಸರು.

ಇದನ್ನು ಓದಿ : ಅಕ್ರಮ ಗೋ ಮಾಂಸ ಅಂಗಡಿ ಮೇಲೆ ದಾಳಿ ; 70 ರಿಂದ 80 ಕೆಜಿ ಮಾಂಸ…

ಜಿಲ್ಲೆಯ ಎಎಸ್ಪಿ ತಮ್ಮಯ್ಯ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಸುಮಾರು 60 ಜನ ಪೊಲೀಸ್ ತಂಡದಿಂದ ನಡೆದ ದಾಳಿ. ಬಳಿಕ ಮೊಬೈಲ್​ಗಳು ಅಷ್ಟೇ ಅಲ್ಲದೆ ಜೊತೆಗೆ ಗಾಂಜ, ಸಿಗರೇಟ್ ಸೇರಿದಂತೆ ಇನ್ನಿತರ ಮಾದಕ ವಸ್ತುಗಳನ್ನು, ಎಸ್ಪಿ ಹರಿರಾಮ್ ಶಂಕರ್ ಮಾರ್ಗದರ್ಶನದಲ್ಲಿ ವಶಕ್ಕೆ ಪಡೆದ ಪೋಲಿಸರು.

Exit mobile version