Site icon PowerTV

ಅವ್ರೆಲ್ಲ ಕಳ್ಳ ನನ್ನ ಮಕ್ಕಳು : ಶಾಸಕ ಯತ್ನಾಳ್

ವಿಜಯಪುರ : ಸಾಹಿತಿಗಳು ಹಾಗೂ ಬುದ್ದಿಜೀವಿಗಳು ನಮಗೆ ಜೀವ ಬೆದರಿಕೆ ಇದೆ ಎಂದು ಗೃಹ ಸಚಿವರಿಗೆ ಪತ್ರ ಬರೆದ ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅವರೇ ಬರೆಸಿಕೊಳ್ತಾರೆ. ಬರೆಸಿಕೊಂಡು ಸೆಕ್ಯೂರಿಟಿ ತೆಗೆದುಕೊಳ್ತಾರೆ ಕಳ್ಳ ನನ್ನ ಮಕ್ಕಳು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಒಂದೆರಡು ಗನ್​ಮೆನ್ ಇಟ್ಕೊಂಡು ಅಡ್ಡಾಡ್ತಾರೆ. ಇಂತಹ ಕಳ್ಳ ನನ್ನ ಮಕ್ಕಳು ಬುದ್ಧಿ ಜೀವಿಗಳು ಆಗಿದ್ದಾರೆ. ಅವರಿಗೆ ಬುದ್ದಿ ಜೀವಿಗಳು ಅನ್ನಬೇಡಿ, ಲದ್ದಿ ಜೀವಿಗಳು ಅನ್ನಿ. ಇಂತಹವರಿಗೆ ಗೌರವ ಇಲ್ಲ ಎಂದು ಶಾಸಕ ಯತ್ನಾಳ್ ಲೇವಡಿ ಮಾಡಿದ್ದಾರೆ.

ಬಿಜೆಪಿಗೆ ಬೈಯ್ಯಲು ಪೇಮೆಂಟ್

ಆರ್​ಎಸ್ಎಸ್ ಎಂಬುದು ರಾಷ್ಟ್ರೀಯ ಸುಳ್ಳುಗಾರಿಕೆ ಸಂಸ್ಥೆ ಎಂಬ ಕೆ.ಎಸ್ ಭಗವಾನ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅವರೆಲ್ಲ ಲೋಫರ್ಸ್ ಇದ್ದಾರೆ, ಅವರು ಸಾಹಿತಿಗಳಲ್ಲ. ಪೇಮೆಂಟ್ ಗಿರಾಕಿಗಳು, ಕಮ್ಯುನಿಷ್ಟರು, ಕಾಂಗ್ರೆಸ್ ನ ಏಜೆಂಟರು ಅವರು. ಆರ್​ಎಸ್ಎಸ್​ಗೆ, ವಿಹೆಚ್​ಪಿಗೆ, ಹಿಂದುತ್ವಕ್ಕೆ ಬೈಯಲು, ಭಜರಂಗದಳ, ಬಿಜೆಪಿಗೆ ಬೈಯ್ಯಲು ಪ್ರತಿ ತಿಂಗಳು ಅವರಿಗೆ ಪೇಮೆಂಟ್ ಮಾಡ್ತಾರೆ ಎಂದು ಗುಡುಗಿದ್ದಾರೆ.

Exit mobile version