Site icon PowerTV

ಬೆಂಗಳೂರಲ್ಲಿ ದೇಶದ ಮೊದಲ 3D ಅಂಚೆ ಕಚೇರಿ ಲೋಕಾರ್ಪಣೆ

ಬೆಂಗಳೂರು : ಭಾರತದ ಮೊದಲ 3 ಡಿ ಅಂಚೆ ಕಚೇರಿಯನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಬೆಂಗಳೂರಿನಲ್ಲಿ ಉದ್ಟಾಟನೆ ಮಾಡಿದ್ದಾರೆ.

ಮಾರ್ಚ್ 21ರಿಂದ ನಿರ್ಮಾಣ ಕಾರ್ಯ ಆರಂಭವಾಗಿದ್ದು 44 ದಿನಗಳ ಅವಧಿಯಲ್ಲಿ ಇದನ್ನು ಸಿದ್ಧಪಡಿಸಲಾಗಿದೆ. ಇದನ್ನು ‘ಕೇಂಬ್ರಿಡ್ಜ್ ಲೇಔಟ್ PO’ ಎಂದು ಹೆಸರಿಸಲಾಗಿದೆ.

ಕಟ್ಟಡದ ರಚನೆಯು ಮೇ 3ರೊಳಗೆ ಪೂರ್ಣಗೊಂಡಿದ್ದರೂ, ಒಳಚರಂಡಿ ಮತ್ತು ನೀರಿನ ಜಾಲವನ್ನು ರಚಿಸುವುದು ಎರಡು ತಿಂಗಳುಗಳನ್ನು ತೆಗೆದುಕೊಂಡಿತ್ತು. ನಂತರ ಸಚಿವರ ಸಮಯಾವಕಾಶಕ್ಕಾಗಿ ಇನ್ನೂ ಒಂದು ತಿಂಗಳು ಹಿಡಿಯಿತು.

ಇನ್ನು ಔಪಚಾರಿಕವಾಗಿ 3ಡಿ ಮುದ್ರಿತ ಕಚೇರಿ ಆರಂಭದ ನಂತರ ಹಲಸೂರು ಬಜಾರ್‌ನಲ್ಲಿರುವ ಪ್ರಸ್ತುತ ಅಂಚೆ ಕಚೇರಿಯನ್ನು ಮುಚ್ಚಲಾಗುವುದು ಮತ್ತು ಸಿಬ್ಬಂದಿ ಮತ್ತು ಸಾಮಗ್ರಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.

ಪ್ರಧಾನಿ ಮೋದಿ ಟ್ವೀಟ್‌

ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್‌ನಲ್ಲಿ ಭಾರತದ ಮೊದಲ 3D ಮುದ್ರಿತ ಅಂಚೆ ಕಚೇರಿ ನೋಡಲು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯಾಗುತ್ತದೆ. ಇದು ನಮ್ಮ ರಾಷ್ಟ್ರದ ನಾವೀನ್ಯತೆ ಮತ್ತು ಪ್ರಗತಿಗೆ ಸಾಕ್ಷಿಯಾಗಿದೆ, ಇದು ಸ್ವಾವಲಂಬಿ ಭಾರತದ ಕಲ್ಪನೆಯನ್ನು ಸಹ ಒಳಗೊಂಡಿದೆ. ಅಂಚೆ ಕಚೇರಿ ನಿರ್ಮಾಣದಲ್ಲಿ ಶ್ರಮಿಸಿದವರಿಗೆ ಅಭಿನಂದನೆಗಳು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

Exit mobile version