Site icon PowerTV

ಕಾಂಗ್ರೆಸ್ ತಳಿ ರಾಕ್ಷಸರದ್ದು : ಶಾಸಕ ಯತ್ನಾಳ್

ವಿಜಯಪುರ : ಕಾಂಗ್ರೆಸ್ ಅನ್ನೋದೆ ಒಂದು ರಾಕ್ಷಸ ಸಂತತಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಓಟು ಹಾಕಿದವರು ರಾಕ್ಷಸರು ಎಂದ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.

ಕಾಂಗ್ರೆಸ್ ತಳಿ ರಾಕ್ಷಸರದ್ದು. ಕಾಂಗ್ರೆಸ್ ವಂಶಪಾರಂಪರೆಯ ಬ್ಯಾಗ್ರೌಂಡ್ ಸರಿ ಇಲ್ಲ. ಕಾಂಗ್ರೆಸ್ ನದ್ದು ಹೈಬ್ರೀಡ್ ತಳಿ. ಬಿಜೆಪಿಗೆ ಓಟು ಹಾಕಿದವರು ರಾಕ್ಷಸರು ಎಂದು ದೇಶದ ಮತದಾರರನ್ನು ಅವಮಾನ ಮಾಡಿದ್ದಾರೆ ಎಂದು ಗುಡುಗಿದ್ದಾರೆ.

ನಾವು ಮತದಾರರನ್ನು ಹಾಗೆ ಹೇಳಲ್ಲ. ಮತದಾರರನ್ನ ರಾಕ್ಷಸ, ಪಾಕ್ಷಸ ಅನ್ನಲ್ಲ. ಅದು ಕಾಂಗ್ರೆಸ್​ ನವರ ಮನಸ್ಥಿತಿ. ಇದನ್ನ ಮತದಾರರು ತಿಳಿದುಕೊಳ್ಳಬೇಕು ಎಂದು ಕಾಂಗ್ರೆಸ್​ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

Exit mobile version