Site icon PowerTV

ಯಾರು ಬರ್ತಾರೆ ಅನ್ನೋದನ್ನ ನಾನ್ ಹೇಳಲ್ಲ : ಡಿ.ಕೆ ಶಿವಕುಮಾರ್

ಬೆಂಗಳೂರು : ಬಿಜೆಪಿ ಶಾಸಕ ಎಸ್​.ಟಿ. ಸೋಮಶೇಖರ್​ ಕಾಂಗ್ರೆಸ್ ಸೇರುವ ವಿಚಾರಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸೇರಲು ಸಿದ್ದವಿದ್ದರೆ ಸೇರಿಸಿಕೊಳ್ಳಿ ಅಂತ ಹೇಳಿದ್ದೇನೆ ಎಂದು ಆಪರೇಷನ್ ಹಸ್ತದ ಸುಳಿವು ನೀಡಿದ್ದಾರೆ.

ಕೆಲ ಕಾರ್ಯಕರ್ತರು ಬಹಳ ಉತ್ಸಾಹದಿಂದ ಕೆಲಸ ಮಾಡ್ತಿದ್ದಾರೆ. ವೋಟ್​ ಶೇರ್ ಜಾಸ್ತಿ ಮಾಡಿಕೊಳ್ಳಲು ಕಾರ್ಯಕರ್ತರಿಗೆ ಹೇಳಿದ್ದೇವೆ. ಸೋಮಶೇಖರ್ ಪಕ್ಷ ಸೇರ್ಪಡೆ ಬಗ್ಗೆ ವೈಯಕ್ತಿಕವಾಗಿ ಹೇಳಿರಬಹುದು. ಆ ವಿಚಾರ ಇನ್ನೂ ನನ್ನ ತನಕ ಬಂದಿಲ್ಲ, ಯಾವಾಗ ಏನು ಬೇಕಾದರೂ ಆಗಬಹುದು. ಆದ್ರೆ, ಯಾರು ಬರುತ್ತಾರೆ ಏನು ಎಂಬುವುದನ್ನ ನಾನು ಹೇಳುವುದಿಲ್ಲ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳಿದ್ದಾರೆ.

ಇಡ್ಕೊಂಡಿರೋರು ಯಾರು ಕರ್ಕೊಂಡ್ ಹೋಗಲಿ

ಆಪರೇಷನ್ ಹಸ್ತದ ವಿಚಾರಕ್ಕೆ ಮಾಜಿ ಸಿಎಂ ಹೆಚ್​​.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅದು ಅವರ ಪಕ್ಷಕ್ಕೆ ಸೇರಿದ ವಿಚಾರ. ನಮ್ಮ ಪಕ್ಷದವರು ಹೋಗೋದಿದ್ರೆ, ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಕರ್ಕೊಂಡ್ ಹೋಗಲಿ. ಇಡ್ಕೊಂಡಿರೋರು ಯಾರು ಕರ್ಕೊಂಡ್ ಹೋಗಲಿ ಎಂದು ಕಿಡಿಕಾರಿದ್ದಾರೆ.

Exit mobile version