Site icon PowerTV

ಮತ್ತೆ 2A ಮೀಸಲಾತಿ ಹೋರಾಟಕ್ಕೆ ಕರೆ ಕೊಟ್ಟ ಮೃತ್ಯುಂಜಯ ಶ್ರೀ

ದಾವಣಗೆರೆ : ಮತ್ತೆ 2A ಮೀಸಲಾತಿ ಹೋರಾಟಕ್ಕೆ ಕೂಡಲ ಸಂಗಮ ಶ್ರೀ ಜಯಮೃತ್ಯುಂಜಯ ಸ್ವಾಮಿಜಿ ಕರೆ ನೀಡಿದ್ದಾರೆ.

ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ವಿಚಾರವಾಗಿ ದಾವಣಗೆರೆಯಲ್ಲಿ ಮಾತನಾಡಿರುವ ಅವರು, ಲೋಕಸಭಾ ಚುನಾವಣೆ ಒಳಗೆ ಮೀಸಲಾತಿ ಕೊಡಬೇಕು ಎಂದು ಹೇಳಿದ್ದಾರೆ.

ಕಳೆದ ಅವಧಿಯ ಕೊನೆಯಲ್ಲಿ ಸರ್ಕಾರ 2D ಗ್ರೂಪ್ ನಿರ್ಮಾಣ ಮಾಡಿತ್ತು. ಆದರೆ, 2A, 2D ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ನಾವು ಸಿಎಂ ಸಿದ್ದರಾಮಯ್ಯನವರಿಗೆ 2A ಮೀಸಲಾತಿ ಹಕ್ಕೋತ್ತಾಯ ಮಾಡಿದ್ದೇವೆ. ಸಮಸ್ಯೆ ಸರಿಪಡಿಸಿ ನ್ಯಾಯ ಕೊಡಿಸಿ ಅಂತ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ನಿಪ್ಪಾಣಿಯಿಂದ ಹೋರಾಟ ಪ್ರಾರಂಭ

ಅಧಿವೇಶನ ಬಳಿಕ ಕಾನೂನು ಸಲಹೆ ಗಾರರ ಸಭೆ ಕರೆಯುತ್ತೇವೆ ಎಂದು ಹೇಳಿ ಸಿಎಂ ಸಭೆ ಕರೆದಿಲ್ಲ. ಹೀಗಾಗಿ, ನಾವು ಕೂಡಲಸಂಗಮ‌ ಸಭೆಯಲ್ಲಿ ನಿರ್ಣಯ ಮಾಡಿದ್ದೇವೆ. ನಿಪ್ಪಾಣಿ ವಿಧಾನಸಭಾ ಕ್ಷೇತ್ರದಿಂದ ಹೋರಾಟ ಪ್ರಾರಂಭವಾಗಲಿದೆ. ಶ್ರಾವಣ ಮಾಸದಲ್ಲಿ ಇಷ್ಟಲಿಂಗ ವಿಶೇಷ ಪೂಜೆಗಳ ಮೂಲಕ ಮತ್ತೆ ಹೋರಾಟ ಪ್ರಾರಂಭ ಎಂದು ವಿನೂತನ ಹೋರಾಟಕ್ಕೆ ಕರೆ ನೀಡಿದ್ದಾರೆ.

ಸಿಎಂ ಹಾಲುಮತ ಸಮಾಜಕ್ಕೆ ಕೇಂದ್ರಕ್ಕೆ ಎಸ್​ಟಿ ಶಿಫಾರಸ್ಸು ಮಾಡಿದ್ದಾರೆ. ಆ ಜಾಗ ಖಾಲಿ ಆಗುತ್ತದೆ, ಆ ಸ್ಥಾನ ನಮಗೆ ಕೊಡಿಸಲಿ. ಎಲ್ಲಾ ಲಿಂಗಾಯಿತರಿಗೆ ಓಬಿಸಿ ಮೀಸಲಾತಿ ನೀಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಿ ಎಂದು ಜಯಮೃತ್ಯುಂಜಯ ಶ್ರೀ ಒತ್ತಾಯಿಸಿದ್ದಾರೆ.

Exit mobile version