ಸ್ಪಂದನಾ ಕುರಿತು ನಟ ವಿಜಯ್ ರಾಘವೇಂದ್ರ ಭಾವನಾತ್ಮಕ ಸಾಲುಗಳೊಂದಿಗೆ ಇನ್ಸ್ಟಾಗ್ರಾಂ ನಲ್ಲಿ ವೀಡಿಯೊ ಒಂದನ್ನು ಹಂಚಿಕೊಂಡಿದ್ದು ವೈರಲ್ ಆಗುತ್ತಿದೆ.
ನಟ ವಿಜಯ್ ರಾಘವೇಂದ್ರ ಪತ್ನಿ ಇತ್ತೀಚೆಗೆ ಹೃದಯಾಘಾತದಿಂದ ದುರಂತ ಸಾವಿಗೀಡಾಗಿ 13 ದಿನಗಳು ಕಳೆದ ಬಳಿಕ, ತಮ್ಮ ಪತ್ನಿಯನ್ನು ನೆನೆದು ಭಾವುಕರಾಗಿರುವ ವಿಜಯ್ ರಾಘವೇಂದ್ರ, ಮುದ್ದಿನ ಮಡದಿಗೆ ತಮ್ಮದೇ ಸಾಲುಗಳಲ್ಲಿ ಭಾವನಾತ್ಮಕ ಪದಗಳಿಗೆ ಧನಿಯಾಗಿ ವಿಡಿಯೋ ಹಂಚಿಕೊಂಡಿದ್ದಾರೆ.
ಈ ವೀಡಿಯೋದಲ್ಲಿ
ಸ್ಪಂದನ
ಹೆಸರಿಗೆ ತಕ್ಕ ಜೀವ
ಉಸಿರಿಗೆ ತಕ್ಕ ಭಾವ
ಅಳತೆಗೆ ತಕ್ಕ ನುಡಿ
ಬದುಕಿಗೆ ತಕ್ಕ ನಡೆ
ನಮಗೆಂದೇ ಮಿಡಿದೆ ನಿನ್ನ ಹೃದಯವ
ನಿಲ್ಲದು ನಿನ್ನೊಂದಿಗಿನ ಕಲರವ!
ನಾನೆಂದು ನಿನ್ನವ, ಕೇವಲ ನಿನ್ನವ.. ಚಿನ್ನ
ಎನ್ನುವ ಸಾಲುಗಳನ್ನೊಳಗೊಂಡ ವೀಡಿಯೋವನ್ನು ತಮ್ಮ ಇನ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
