Site icon PowerTV

ಮನುಷ್ಯರನ್ನು ಕಂಡು ಗಾಬರಿಗೊಂಡ ನಾಗರಹಾವು

ಬೆಂಗಳೂರು : ನಾಗರಹಾವೊಂದು ಹೋಗುತ್ತಿದ್ದ ವೇಳೆ ಮನುಷ್ಯರನ್ನು ಕಂಡು ಗಾಬರಿಗೊಂಡ ಹಾವು ಮನೆಯೊಂದಕ್ಕೆ ನುಗ್ಗಿದೆ ಘಟನೆ ನಗರದ ಲಗ್ಗೆರೆ ಮುನೇಶ್ವರ ಬಡಾವಣೆಯಲ್ಲಿ ನಡೆದಿದೆ.

ನಿನ್ನೆ ಸಂಜೆ ಸುಮಾರು 8.30 ಸಮಯದಲ್ಲಿ ನಾಗರಹಾವು ಒಂದು ರಸ್ತೆಯಲ್ಲಿ ಬರುತ್ತಿದ್ದ ವೇಳೆ ಮನುಷ್ಯರನ್ನು ಕಂಡು ಹೆದರಿ ಪಕ್ಕದಲ್ಲಿದ್ದ ಮನೆಯೊಂದಕ್ಕೆ ನುಗ್ಗಿದೆ. ಮನೆಗೆ ನುಗ್ಗಿದ್ದ ಹಾವು ಗ್ರೌಂಡ್ ಫ್ಲೋರ್​ನಲ್ಲಿ ಇರಿಸಿದ್ದ ಎರಡು ಗ್ಯಾಸ್ ಸಿಲೆಂಡರ್ ಮಧ್ಯೆ ಹೋಗಿ ಸೇರಿಕೊಂಡಿದೆ.

ಇದನ್ನು ಓದಿ : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ!

ಈ ಘಟನೆಯಿಂದ ಗಾಬರಿಗೊಂಡಿದ್ದು, ಹಾವು ಮನೆಯೊಳಗೆ ಹೋಗಿರುವ ವಿಷಯವನ್ನು ಮನೆಯವರಿಗೆ ತಿಳಿಸಿದ ಜನರು. ಬಳಿಕ ಗಾಬರಿಗೊಂಡ ಮನೆಯವರು ತಕ್ಷಣ ಪೋಲಿಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಪೋಲಿಸರು ಬರದ ಕಾರಣ ಪಕ್ಕದಲ್ಲಿದ್ದ ಕೂಲಿ ನಗರ ವಾಸಿಗಳು ಹಾವು ಹಿಡಿಯುವರಾಗಿದ್ದು, ಅವರನ್ನು ಕರೆಸಿ ಹಾವನ್ನು ಸುರಕ್ಷಿತವಾಗಿ ಹಿಡಿದು ಭಯದ ವಾತವರಣವನ್ನು ತಿಳಿಗೊಳಿಸಿದ್ದಾರೆ.

Exit mobile version