Site icon PowerTV

ಡಿಸಿಎಂ ಆದವ್ರು ಯಾವ ಬೆಂಚ್​ನಲ್ಲಿ ಕುಳಿತವ್ರೆ? : ಪರಂಗೆ STS ತಿರುಗೇಟು

ಬೆಂಗಳೂರು : ಬಿಜೆಪಿ ಶಾಸಕರು ಕಾಂಗ್ರೆಸ್​ ಪಕ್ಷಕ್ಕೆ ಬಂದರೆ ಅವರಿಗೆ ಫಸ್ಟ್ ಬೆಂಚ್​ ಸಿಗಲ್ಲ ಎಂಬ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿಕೆಗೆ ಮಾಜಿ ಸಚಿವ ಎಸ್.ಟಿ ಸೋಮಶೇಖರ್ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅವರು ಈಗ ಯಾವ ಬೆಂಚ್ ಮೇಲೆ ಕುಳಿತವರೆ. ಉಪಮುಖ್ಯಮಂತ್ರಿ ಆದವರು ಯಾವ ಬೆಂಚ್​ನಲ್ಲಿ ಕುಳಿತವರೆ? ಎಂದು ಕುಟುಕಿದ್ದಾರೆ.

ಪರಮೇಶ್ವರ್ ಅವ್ರು ಈಗ ಎಲ್ಲಿದ್ದಾರೆ? ಸರಿಯಾಗಿ ಇದ್ದಿದ್ರೆ ಅವರು ಎಲ್ಲಿ ಇರ್ತಾ ಇದ್ರು? ಇಲ್ಲಿ ಇರ್ತಾ ಇದ್ರಾ? ನನಗೆ ಇಲ್ಲಿ ಯಾವ ಬೆಂಚ್ ಇಲ್ಲ. ಹಿಂದೆಯೂ ಇಲ್ಲ, ಮುಂದೆಯೂ ಇಲ್ಲ‌. ಇಲ್ಲಿ ನನಗೆ ನಾನೆ ಹಿಂದೆ ಮುಂದೆ, ಎಲ್ಲಾ ನಾನೇ ಎಂದು ಟಾಂಗ್ ಕೊಟ್ಟಿದ್ದಾರೆ.

ನಾನು ಪಕ್ಷ ಬಿಡಲ್ಲ

ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಪೋನ್ ಮಾಡಿದ್ರು. ಏನು ನಿರ್ಧಾರ ತೆಗೆದುಕೊಳ್ಳಬೇಡಿ ಅಂದ್ರು. ನಾನು ಏನು ನಿರ್ಧಾರ ತೆಗೆದುಕೊಳ್ಳಲ್ಲ ಅಂತ ಹೇಳಿದ್ದೆ. ಸಮಸ್ಯೆ ಬಗೆಹರಿಸಿ ಅಂತ ಕಟೀಲ್ ಅವರಿಗೆ ಹೇಳಿದ್ದೇನೆ. ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ನಾನು ಪಕ್ಷ ಬಿಡಲ್ಲ, ಇಲ್ಲಿರುವ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದ್ದಾರೆ.

ಬಿಜೆಪಿಯಲ್ಲೇ ಮಾತನಾಡಿದ್ರು

ಚುನಾವಣೆ ಮುಂಚೆ ನನ್ನ ಸೋಲಿಸಬೇಕು ಅಂತ ಬಿಜೆಪಿಯಲ್ಲೇ ಮಾತನಾಡಿದ್ರು. ಇದನ್ನು ಬಗೆಹರಿಸಬೇಕು. ಪಕ್ಷದ ಬ್ಯಾನರ್​ನಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡರು. ನನ್ನ ‌ಪೋಟೋ ಸಹ ಬಳಸಿಕೊಂಡರು. ಮೊದಲು ನನ್ನ ವಿರೋಧ ಮಾಡಿದ ಮೇಲೆ ಅವರು ನನ್ನ ಪೋಟೋ ಬಳಸಿಕೊಂಡು ಹುಟ್ಟುಹಬ್ಬ ಆಚರಣೆ ಯಾಕೆ ಮಾಡಬೇಕು? ನನ್ನ ವಿರೋಧ ಮಾಡಿಯೇ ನನ್ನ ಬಳಸಿಕೊಂಡು ಹುಟ್ಟುಹಬ್ಬ ಆಚರಣೆ ಮಾಡಿದ್ದು ತಪ್ಪು ಎಂದು ತಿಳಿಸಿದ್ದಾರೆ.

Exit mobile version